ಕರಾವಳಿಸುಳ್ಯ

ಸುಳ್ಯ:ರಾಜ್ಯ ಮಟ್ಟದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟ, ಕೆವಿಜಿ ಪಾಲಿಟೆಕ್ನಿಕ್‌ಗೆ ಸಮಗ್ರ ಪ್ರಶಸ್ತಿಯ ಗರಿ..!

ನ್ಯೂಸ್ ನಾಟೌಟ್ : ನವಂಬರ್ 1, 2 ,ಮತ್ತು 3ರಂದು ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್ ನ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಕೆವಿಜಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿ ಸಮಗ್ರ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕೆವಿಜಿ ಪಾಲಿಟೆಕ್ನಿಕ್‌ನ ಕಬಡ್ಡಿ ತಂಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ, ವೈಯಕ್ತಿಕ ವಿಭಾಗಗಳಲ್ಲಿ ಅಟೋಮೊಬೈಲ್ ವಿಭಾಗದ ಕರುಣ್ 1500 ಮೀಟರ್ ಓಟದಲ್ಲಿ ದ್ವಿತೀಯ ಹಾಗೂ 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ವಿಭಾಗದ ಕುಮಾರಿ ಚೈತ್ರಾಲಿ 1500 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಹಾಗೂ 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇನ್ನು ಸಿವಿಲ್ ವಿಭಾಗದ ಸೌಮ್ಯಾ ಕೆ. ಈಟಿ ಎಸೆತದಲ್ಲಿ ತೃತೀಯ ಸ್ಥಾನ, ಸಿವಿಲ್ ವಿಭಾಗದ ಮೌನೇಶ್ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.ಹುಡುಗರ ತಂಡ 4 * 400 ಮೀಟರ್ ರಿಲೇ ಯಲ್ಲಿ ತೃತೀಯ ಸ್ಥಾನ ಹಾಗೂ 4*100 ಮೀಟರ್ ರಿಲೇ ಯಲ್ಲಿ ದ್ವಿತೀಯ ಸ್ಥಾನ ಗಳಿಸಿದರೆ, ಹುಡುಗಿಯರ ತಂಡ 4*400 ಮೀಟರ್ ರಿಲೇ ಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದೆ.

ಕ್ರೀಡಾ ಸಂಯೋಜಕ ಪ್ರದೀಪ್ ಮುರೂರು, ಸಹಾಯಕರಾದ ಆನಂದ ಕುಡೆಂಬಿ ಹಾಗೂ ಪೂರ್ಣಿಮಾ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಅದ್ಭುತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಕಾರ್ಯನಿರ್ವಹಣಾಧಿಕಾರಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

https://www.youtube.com/watch?v=kQPnmAF-t3E&t=68s

Related posts

ಮಂಗಳೂರು: ಬಜರಂಗದಳ ಕಾರ್ಯಕರ್ತನನ್ನು ವಿವಾಹವಾದ ಮುಸ್ಲಿಂ ಯುವತಿ..!ಸುರತ್ಕಲ್ ನಲ್ಲೊಂದು ಹಿಂದೂ-ಮುಸ್ಲಿಂ ಲವ್ ಕಹಾನಿ..!

ಕಾರ್ಕಳ ಕ್ಷೇತ್ರದಲ್ಲೇ ಸ್ಪರ್ಧಿಸುತ್ತಾರಂತೆ ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಮಂಗಳೂರು: ರಿಕ್ಷಾದಲ್ಲಿ 2.50 ಕ್ವಿಂಟಾಲ್ ಗೋಮಾಂಸ ಅಕ್ರಮ ಸಾಗಾಟ..!, ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು