ನ್ಯೂಸ್ ನಾಟೌಟ್ : ಲಾರಿ ಮತ್ತು ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದ ಘಟನೆ ಮಾಣಿ ಮೈಸೂರು ಹೆದ್ದಾರಿಯ ಅಂರತೋಡು ಸಮೀಪದ ಬಿಳಿಯಾರಿನಲ್ಲಿ ನಡೆದಿದೆ.ಘಟನೆಗೆ ಎರಡೂ ಕಾರುಗಳು ಜಖಂಗೊಂಡಿವೆ ಎಂದು ತಿಳಿದು ಬಂದಿವೆ.
ಲಾರಿಯು ಸುಳ್ಯ ಕಡೆಯಿಂದ ಮೈಸೂರಿಗೆ ಹೋಗುತ್ತಿತ್ತು ಎನ್ನಲಾಗಿದೆ.ಈ ವೇಳೆ ಮಡಿಕೇರಿ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.ಈ ಸಂದರ್ಭ ಕಾರು ಚಾಲಕ ಅಪಘಾತ ತಪ್ಪಿಸಲು ಬ್ರೇಕ್ ಹಾಕಿದ್ದಾರೆ.ಆಗ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಕಾರು ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಘಟನಾ ಸ್ಥಳದಲ್ಲಿ ಹತ್ತಾರು ಜನ ಸೇರಿದ್ದು,ಕೆಲಹೊತ್ತು ವಾಹನ ಸಂಚಾರಕ್ಕೂ ಸ್ವಲ್ಪ ಅಡಚಣೆಯಾಯಿತು.ಘಟನೆಯಿಂದಾಗಿ ಕಾರು ಚಾಲಕರು ಸಣ್ಣಪುಟ್ಟ ಗಾಯಗಳಾಗಿದ್ದು,ಅಪಾಯದಿಂದ ಪಾರಾಗಿದ್ದಾರೆ. ಅಪಘಾತವಾಗಿರುವ ಒಂದು ಕಾರು ಮಂಗಳೂರಿನದ್ದಾಗಿದ್ದು,ಮತ್ತೊಂದು ಕಾರು ಸುಳ್ಯದ್ದೇ ಎಂದು ತಿಳಿದು ಬಂದಿದೆ.