ಕರಾವಳಿಸುಳ್ಯ

ಸುಳ್ಯ :ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ 29 ನೇ ವರ್ಷದ ದೀಪೋತ್ಸವ,ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ಡಿ.9 ರಂದು ಕಾರ್ಯಕ್ರಮ

ನ್ಯೂಸ್ ನಾಟೌಟ್ :ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ 29 ನೇ ವರ್ಷದ ದೀಪೋತ್ಸವವು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ.ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ (ರಿ) ವತಿಯಿಂದ ಡಿಸೆಂಬರ್ 9ರಂದು ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಲಾಗಿದೆ.

ಗುರುಸ್ವಾಮಿ ಎಸ್.ಕೆ ಸತೀಶ್ ಜಟ್ಟಿಪಳ್ಳ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ನಡೆಯಲಿದ್ದು, ಬೆಳಗ್ಗೆ 5:30 ಕ್ಕೆ ಗಣಪತಿ ಹವನ , 6 ಗಂಟೆಗೆ ಉಷಾ ಪೂಜೆ , ಮಧ್ಯಾಹ್ನ 12 ಕ್ಕೆ ಮಹಾಪೂಜೆ , ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಅಯ್ಯಪ್ಪ ಭಕ್ತಾದಿಗಳು ಹಳೆಗೇಟು ಬಳಿಯಿಂದ ಹೊರಟು ಗಾಂಧಿನಗರದವರೆಗೆ ಬಂದು ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ತಲುಪಲಿದ್ದಾರೆ.

ಈ ವೇಳೆ ಅಲ್ಲಿ ಪ್ರತಿಷ್ಠಾಪಿಸಿರುವ ಅಯ್ಯಪ್ಪ ಸನ್ನಿಧಾನಕ್ಕೆ ಚೆಂಡೆ , ವಾದ್ಯಘೋಷಗಳೊಂದಿಗೆ ವಿಶೇಷ ಸಿಡಿಮದ್ದು ಸೇರಿದಂತೆ ಬಾಲಕಿಯರ ದೇಪಾರಾಧನೆಯ ಬೆಳಕು, ವಿದ್ಯುತ್ ಪ್ರವಾಹದೊಂದಿಗೆ ” ಪಾಲ್ ಕೊಂಬು ” ಮೆರವಣಿಗೆಯು ನಡೆಯಲಿದೆ.ಬಳಿಕ ರಾತ್ರಿ7:30 ರಿಂದ 9:30 ರ ತನಕ ಭಕ್ತಿಗಾನ ಸುಧಾ , ಬಳಿಕ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯಿಂದ “ಧರ್ಮದೈವ ಧೂಮಾವತಿ ” ಯಕ್ಷಗಾನ ಬಯಲಾಟ ಕೂಡ ನಡೆಯಲಿದೆ.

ಡಿಸೆಂಬರ್ .10 ರಂದು ಬೆಳಗ್ಗೆ 4:30 ರಿಂದ ಅಯ್ಯಪ್ಪ ಭಕ್ತರಿಂದ ಅಗ್ನಿಸೇವೆ ನಡೆಯಲಿದೆ. ಈ ಪುಣ್ಯ ಕಾರ್ಯದಲ್ಲಿ ಸಕಲ ಅಯ್ಯಪ್ಪ ಭಕ್ತರು ಹಾಗೂ ಊರ ಭಕ್ತರು ಭಾಗವಹಿಸಿ ಆಶೀರ್ವಾದ ಪಡೆಯಬೇಕಾಗಿ ಅಧ್ಯಕ್ಷ ಜನಾರ್ಧನ ದೋಳ, ಗೌರವಾಧ್ಯಕ್ಷ ಶಿವಪ್ರಕಾಶ ಅಡ್ಪಂಗಾಯ , ಕಾರ್ಯದರ್ಶಿ ಸತೀಶ್ ಕಾನತ್ತಿಲ , ಕೋಶಾಧಿಕಾರಿ ( ನ್ಯಾಯವಾದಿ ) ರಾಮಕೃಷ್ಣ ಎ. , ಉಪಾಧ್ಯಕ್ಷ ಸಂಜೀವ ಬೆಟ್ಟಂಪಾಡಿ , ಜೊತೆ ಕಾರ್ಯದರ್ಶಿ ಸುಧಾಕರ ಕುರುಂಜಿ ಭಾಗ್ , ನಿರ್ದೇಶಕರು -ಸರ್ವಸದಸ್ಯರು ತಿಳಿಸಿದ್ದಾರೆ.

Related posts

ಸುಬ್ರಹ್ಮಣ್ಯ,ಸುಳ್ಯ ಭಾಗದಲ್ಲಿ ಧಾರಾಕಾರ ಮಳೆ, ಕೆಲವೆಡೆ ಹಾನಿ

ಕಾಂಗ್ರೆಸ್ ಸೇರುವ ಕುರಿತು ಡಿವಿ ಸದಾನಂದ ಗೌಡ ಹೇಳಿದ್ದೇನು..? ಮಹತ್ವದ ಪತ್ರಿಕಾಗೋಷ್ಠಿ ಹೇಳಿಕೆ ಇಲ್ಲಿದೆ ವೀಕ್ಷಿಸಿ

ಸುಳ್ಯ:ಡಾ.ಕೆ.ವಿ.ಜಿಯವರ 95ನೇ ಹುಟ್ಟು ಹಬ್ಬದ ಸ್ಮರಣಾರ್ಥ ಹಾನಿಗೀಡಾದ ಮನೆಗೆ ಹಣ ಹಸ್ತಾಂತರ,ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ (ರಿ) ಸುಳ್ಯ ವತಿಯಿಂದ ಕಾರ್ಯ