ಕರಾವಳಿಸುಳ್ಯ

ಸುಳ್ಯ:NMC ನೇಚರ್ ಕ್ಲಬ್ ವತಿಯಿಂದ ಸಂಶೋಧನಾ ಪ್ರೇರಣಾ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ,ಪರಿಸರ ಸಂಬಂಧಿತ ಹಲವು ಸಮಸ್ಯೆಗಳನ್ನು ಅಧ್ಯಯನ ನಡೆಸುವ ಬಗ್ಗೆ ಚರ್ಚೆ

261

ನ್ಯೂಸ್ ನಾಟೌಟ್ :ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ‘ಸಂಶೋಧನಾ ಪ್ರೇರಣೆ’ ವಿಚಾರವಾಗಿ ಮಾಹಿತಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನವೆಂಬರ್ 02 ಗುರುವಾರದಂದು ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲಿ ನಡೆಯಿತು.

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ಬಯೋ ಇನ್ಫರ್ಮ್ಯಾಟಿಕ್ಸ್ ವಿಭಾಗದ ಉಪನ್ಯಾಸಕರಾದ ಪ್ರೊ. ಶ್ಯಾಮ್ ಪ್ರಸಾದ್ ರಾವ್ ಮತ್ತು ಪ್ರೊ.ಸುದೀಪ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾಲೇಜಿನ ಜೀವವಿಜ್ಞಾನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ನೇಚರ್ ಕ್ಲಬ್ ಸದಸ್ಯರಾಗಿ ಪರಿಸರ ಸಂಬಂಧಿತ ಹಲವು ಸಮಸ್ಯೆಗಳನ್ನು ಅಧ್ಯಯನ ನಡೆಸುವ ಬಗ್ಗೆ ಚರ್ಚಿಸಿದರು. ಈ ಭಾಗದಲ್ಲಿ ಕಾಡಿನ ಪ್ರತಿ ಜೀವಸಂಕುಲದ ಸಂರಕ್ಷಣೆ ಮತ್ತು ಇನ್ನಿತರ ವಿಷಯಗಳ ಬಗ್ಗೆ ಕಾರ್ಯಯೋಜನೆಗಳನ್ನು ರೂಪಿಸಲಾಯಿತು.ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ, ಸಂಶೋಧನೆ ಸಂಬಂಧಿತ ಅವಕಾಶಗಳ ಬಗ್ಗೆ ತಿಳಿಸಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ವಿಜ್ಞಾನ ವಿಭಾಗದ ಸಂಯೋಜಕ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಸತ್ಯಪ್ರಕಾಶ್ . ಡಿ, ವಿದ್ಯಾರ್ಥಿಗಳು ಸಂಶೋಧನಾ ರಂಗದಲ್ಲಿ ತೊಡಗಿಸಿಕೊಂಡು ಜೀವ ಅಧ್ಯಯನ ಕ್ಷೇತ್ರದಲ್ಲಿ ಸಿಗುವ ಅವಕಾಶಗಳ ಸದುಪಯೋಗ ಪಡೆದುಕೊಳ್ಳುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಲೇಜಿನ ನೇಚರ್ ಕ್ಲಬ್ ಸಂಯೋಜಕ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿ ನಿರೂಪಿಸಿದರು. ಸಸ್ಯಶಾಸ್ತ್ರ ಉಪನ್ಯಾಸಕಿ ಕೃತಿಕಾ ಕೆ.ಜೆ. ವಂದಿಸಿದರು. ಕಾಲೇಜಿನ ಜೀವವಿಜ್ಞಾನ ವಿಭಾಗದ ಉಪನ್ಯಾಸಕರು, ನೇಚರ್ ಕ್ಲಬ್ ಸದಸ್ಯರು ಮತ್ತು ಬೋಧಕೇತರ ಸಿಬ್ಬಂದಿಗಳಾದ ಜಯಂತಿ, ಭವ್ಯ ಮತ್ತು ಗೀತಾ ಸಹಕರಿಸಿದರು.

See also  ಸುಳ್ಯ : ಕುಮ್ ಕುಮ್ ಫ್ಯಾಶನ್ ನವೀಕೃತ ಮಳಿಗೆ ನಾಳೆ ಶುಭಾರಂಭ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget