ಕರಾವಳಿಸುಳ್ಯ

ಸುಳ್ಯ:ಇಂದು ಬೆಳ್ಳಂಬೆಳಗ್ಗೆ ನಗರದಲ್ಲಿ ಅಳವಡಿಸಲಾಗಿದ್ದ ಸೌಜನ್ಯ ಪರ ಬ್ಯಾನರ್‌ಗಳ ತೆರವು,ನಗರ ಪಂಚಾಯತ್ ಅಧಿಕಾರಿಗಳ ಕಾರ್ಯಾಚರಣೆ

268

ನ್ಯೂಸ್ ನಾಟೌಟ್ : ಸೌಜನ್ಯ ಪರ ಬ್ಯಾನರ್ ಗಳನ್ನು ಇಂದು ಬೆಳಗ್ಗಿನ ಜಾವ ಸುಳ್ಯ ನಗರ ಪಂಚಾಯತ್ ಅಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.ಸುಳ್ಯ ನಗರದ ಅಲ್ಲಲ್ಲಿ ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು.

ಸುಳ್ಯದಲ್ಲಿ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗಾಂಧಿ ಸ್ಮೃತಿ, ಜನಜಾಗೃತಿ ಜಾಥಾ ಮತ್ತು ಸಮಾವೇಶ ನಡೆಯುತ್ತಿದೆ. ಈ ಮಧ್ಯೆ ನಿನ್ನೆ ರಾತ್ರಿ ನಗರದ ಹಲವೆಡೆ ಸೌಜನ್ಯ ಪರ ಬ್ಯಾನರ್ ಗಳು ಕಾಣಿಸಿಕೊಂಡಿದ್ದವು ಎಂದು ಹೇಳಲಾಗುತ್ತಿದೆ.ಹೀಗಾಗಿ ಬ್ಯಾನರ್ ಅಳವಡಿಸಲು ನ.ಪಂ‌. ಅನುಮತಿ ಪಡೆದುಕೊಂಡಿರಲಿಲ್ಲದ ಕಾರಣ ನ ಪಂ ಅಧಿಕಾರಿಗಳು ತೆರವು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.ಅನುಮತಿ ಪಡೆಯದೆ ಈ ಬ್ಯಾನರ್ ಹಾಕಲಾಗಿರುವುದರಿಂದ ನ.ಪಂ.ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆಂದು ತಿಳಿದುಬಂದಿದೆ.

See also  ಅರಂತೋಡು: ಸಂಭ್ರಮದ ಈದ್ ಮಿಲಾದ್ ಆಚರಣೆ, ಪ್ರತಿಭಾ ಪುರಸ್ಕಾರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget