ನ್ಯೂಸ್ ನಾಟೌಟ್ :ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಭಾಗಗಳು ಹಾಗೂ ನೇಚರ್ ಕ್ಲಬ್ ವತಿಯಿಂದ ಮಾರ್ಚ್ 3ರಂದು ವಿಶ್ವ ವನ್ಯಜೀವಿ ದಿನಾಚರಣೆಯ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು.
ವಿಭಿನ್ನವಾಗಿ ನಡೆದಂತಹ ಈ ಸ್ಪರ್ಧೆಯಲ್ಲಿ ಆಸಕ್ತ ವಿದ್ಯಾರ್ಥಿಗಳು ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನೋಟಿಸ್ ಬೋರ್ಡ್ ನಲ್ಲಿ ಬಿತ್ತರಿಸಿದ ವನ್ಯಜೀವಿ ವಿಷಯಕ್ಕೆ ಸಂಬಂಧಿಸಿದ ಹಲವು ರಸಪ್ರಶ್ನೆಗಳಿಗೆ ಸ್ಥಳದಲ್ಲಿ ಉತ್ತರ ಬರೆದು ನೀಡಿದ ಪತ್ರಿಕೆಯನ್ನು ಸಂಗ್ರಹಿಸಿ ಮೌಲ್ಯಮಾಪನ ಮಾಡಿ ಸ್ಪರ್ಧೆಯ ಅಂತಿಮ ಹಂತಕ್ಕೆ ಅವರನ್ನು ಆಯ್ಕೆ ಮಾಡಲಾಯಿತು. ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ ದ್ವಿತೀಯ ಬಿ.ಎಸ್ಸಿ.ಯ ಕೀರ್ತನ್ ಕೆ.ಕೆ ಪ್ರಥಮ ಬಹುಮಾನವನ್ನು, ಪ್ರಥಮ ಬಿ.ಎಸ್ಸಿ.ಯ ಶ್ವೇತ ಕೆ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು. ಅಂತಿಮ ಬಿಕಾಂನ ದೀಪ್ತಿ ಎ.ಎನ್ ಮತ್ತು ಸೌಜನ್ಯ ತೃತೀಯ ಬಹುಮಾನವನ್ನು ಹಂಚಿಕೊಂಡರು.
ನೇಚರ್ ಕ್ಲಬ್ ನ ಕಾರ್ಯದರ್ಶಿ ಕು. ಶಿಲ್ಪ, ಸ್ಪರ್ಧಾ ಸಂಯೋಜಕರಾದ ತೇಜಸ್, ತನುಷ್ ಮತ್ತು ಕಾರ್ತಿಕ್ ಈ ಸ್ಪರ್ಧೆಯನ್ನು ನಿರ್ವಹಿಸಿದರು.ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ, ಉಪನ್ಯಾಸಕರಾದ ಕೃತಿಕಾ ಕೆ.ಜೆ, ಪಲ್ಲವಿ ಕೆ.ಎಸ್, ಲ್ಯಾಬ್ ಸಹಾಯಕಿ ಭವ್ಯ ಕೆ ಇನ್ನಿತರರು ಮಾರ್ಗದರ್ಶನ ನೀಡಿದರು.
View this post on Instagram