ಕರಾವಳಿಸುಳ್ಯ

ಸುಳ್ಯ: ಎನ್ನೆoಪಿಯುಸಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ,ವಿಜೇತರು ಯಾರು? ಇಲ್ಲಿದೆ ವಿವರ..

219

ನ್ಯೂಸ್ ನಾಟೌಟ್ :”ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ.ಪ್ರತೀ ಸೋಲಿನಲ್ಲಿ ಗೆಲುವಿನ ಸೋಪಾನ ಇದೆ.ಸೋಲು ಯಶಸ್ಸಿನ ಮೆಟ್ಟಿಲು.ಶ್ರದ್ದೆಯಿಂದ ನಿಮ್ಮ ಕೆಲಸದಲ್ಲಿ ನೀವು ತೊಡಗಿಸಿಕೊಳ್ಳಿ ಎಂದು ಎ ಓ ಎಲ್ ಇ (ರಿ )ಸುಳ್ಯ ಇದರ ಕಾರ್ಯದರ್ಶಿ ಕೆ.ವಿ. ಹೇಮನಾಥ್ ಅವರು ಹೇಳಿದರು.

ಅವರು ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ “ಕ್ರೀಡಾಪಟುಗಳು ಕ್ರೀಡಾ ಸ್ಫೂರ್ತಿಯಿಂದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು.ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ಹೊಸ ಹುರುಪು ಲಭಿಸುತ್ತದೆ. ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ.ಎಂ.ಬಾಲಚಂದ್ರ ಗೌಡ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ತಾಲೂಕು ಕ್ರೀಡಾ ಸಂಯೋಜಕರು, ಅರಂತೋಡು ಎನ್ನೆಂಪಿಯುಸಿಯ ದೈ.ಶಿ.ನಿರ್ದೇಶಕರಾದ ಶಾಂತಿ ಎ.ಕೆ,ಎನ್.ಎಮ್. ಸಿ ಸುಳ್ಯ ಇಲ್ಲಿನ ಪ್ರಾಚಾರ್ಯರಾದ ಪ್ರೊ.ಎಂ.ಎಂ ರುದ್ರ ಕುಮಾರ್,ಎನ್ನೆಂಸಿ ದೈ.ಶಿ. ನಿರ್ದೇಶಕರಾದ ಲೆಫ್ಟಿನೆಂಟ್ ಸೀತಾರಾಮ ಎಂ.ಡಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ.ಎಂ. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾಲೇಜಿನ ದೈ.ಶಿ. ನಿರ್ದೇಶಕರಾದ ನಾಗರಾಜ್ ನಾಯ್ಕ್ ಭಟ್ಕಳ, ವಿವಿಧ ಕಾಲೇಜುಗಳ ಉಪನ್ಯಾಸಕರು, ತಂಡದ ಮೇಲ್ವಿಚಾರಕರು,ದೈ.ಶಿ ನಿರ್ದೇಶಕರು,ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿ , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಅಂಬಿಕಾ ಮತ್ತು ಬಳಗದವರು ಪ್ರಾರ್ಥಿಸಿದರು.ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ ಸ್ವಾಗತಿಸಿ,ಉಪನ್ಯಾಸಕರಾದ ವಿನಯ್ ನಿಡ್ಯಮಲೆ ವಂದಿಸಿದರು.ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭದಲ್ಲಿ ಎನ್ನೆಂಸಿಯ ಪ್ರಾಚಾರ್ಯರಾದ ಪ್ರೊ.ರುದ್ರ ಕುಮಾರ್ ಎಂ.ಎಂ, ಸುಳ್ಯ ಎನ್ನೆಂಪಿಯುಸಿ ಪ್ರಾಚಾರ್ಯರಾದ ಹರಿಣಿ ಪುತ್ತೂರಾಯ, ಎನ್ನೆಂಪಿಯು ದೈ.ಶಿ. ನಿರ್ದೇಶಕರಾದ ಲೆ. ಸೀತಾರಾಮ ಎಂ.ಡಿ ,ವೈಟ್ ಲಿಫ್ಟಿಂಗ್ ಕೋಚ್ ರಮೇಶ್.ವಿ,ಕ್ಷೇಮಾಧಿಕಾರಿ ರೇಷ್ಮಾ, ಸಂಸ್ಥೆಯ ದೈ.ಶಿ. ನಿರ್ದೇಶಕರಾದ ನಾಗರಾಜ್ ನಾಯ್ಕ್ ಭಟ್ಕಳ ಉಪಸ್ಥಿತರಿದ್ದರು.

ಎನ್ನೆಂಸಿ ಪ್ರಾಚಾರ್ಯರಾದ ಪ್ರೊ.ಎಂ.ಎಂ ರುದ್ರ ಕುಮಾರ್ ಅವರು ಬಹುಮಾನ ವಿತರಿಸಿದರು.ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ ಸ್ವಾಗತಿಸಿ,ವಂದಿಸಿದರು.ಹುಡುಗರ ವಿಭಾಗದಲ್ಲಿ ನೆಹರು ಮೆಮೋರಿಯಲ್ ಪಪೂ ಕಾಲೇಜು ಸುಳ್ಯ (ಪ್ರ ) ಕೆ.ಎಸ್ ಗೌಡ ನಿಂತಿಕಲ್ಲು (ದ್ವಿ ), ಹಾಗೂ ಹುಡುಗಿಯರ ವಿಭಾಗದಲ್ಲಿ ಶ್ರೀ ಶಾರದಾ ಮಹಿಳಾ ಪಪೂ ಕಾಲೇಜು ಸುಳ್ಯ (ಪ್ರ )ಸ.ಪ.ಪೂ ಕಾಲೇಜು ಗುತ್ತಿಗಾರು ( ದ್ವಿ )ಸ್ಥಾನ ಪಡೆದುಕೊಂಡವು.

ಸರ್ವಾಂಗೀಣ ಆಟಗಾರರಾಗಿ ಎನ್ನೆಂಪಿಯುಸಿ ಸುಳ್ಯದ ತುಕಾರಾಮ್ ಮಣಿಗೆನಪ್ಪ ಮೋಟೆ ಮತ್ತು ಶಾರದಾ ಪ.ಪೂ ಕಾಲೇಜಿನ ಕೃತಿ, ಉತ್ತಮ ದಾಳಿಗಾರರಾಗಿ ಸುಳ್ಯ ಎನ್ನೆoಪಿಯುಸಿಯ ಮಾದೇಶ್ ಬಿ.ಪಿ. ಹಾಗೂ ಶಾರದಾ ಪಪೂ ಕಾಲೇಜಿನ ರಶ್ಮಿ, ಉತ್ತಮ ಹಿಡಿತಗಾರರಾಗಿ ಕೆ.ಎಸ್ . ಗೌಡ ನಿಂತಿಕಲ್ಲು ಕಾಲೇಜಿನ ವಿಖ್ಯಾತ್, ಗುತ್ತಿಗಾರು ಸ.ಪ.ಪೂ ಕಾಲೇಜಿನ ಯಶಿಕ ವೈಯಕ್ತಿಕ ಬಹುಮಾನ ಪಡೆದುಕೊಂಡರು.

  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget