ಕರಾವಳಿಸುಳ್ಯ

ಸುಳ್ಯ:ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ವಿಶೇಷ ಅತಿಥಿಯಾಗಿ ಎನ್‌ಎಂಸಿ ವಿದ್ಯಾರ್ಥಿ ಆಯ್ಕೆ,ರಾಜ್ಯದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳಿಂದ 12 ಮಂದಿಗೆ ಮಾತ್ರ ಅವಕಾಶ

ನ್ಯೂಸ್ ನಾಟೌಟ್: 2025 ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ಗೆ ಸುಳ್ಯದ ಪ್ರತಿಷ್ಟಿತ ನೆಹರೂ ಮೆಮೋರಿಯಲ್ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿ ಎನ್‌ಎಸ್‌ಎಸ್ ನಾಯಕ ಹರ್ಷಿತ್ ಕೆ.ಎಲ್ ವಿಶೇಷ ಅತಿಥಿಗಳಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕದ ವಿವಿಧ ವಿಶ್ವವಿದ್ಯಾನಿಲಯಗಳಿಂದ 12 ಮಂದಿ ಎನ್‌ಎಸ್‌ಎಸ್ ಸ್ವಯಂಸೇವಕರು ದೆಹಲಿಯ ಗಣರಾಜ್ಯೋತ್ಸವ ಪರೇಡಿಗೆ ವಿಶೇಷ ಅತಿಥಿಯಾಗಿ ಆಯ್ಕೆಯಾಗಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಹರ್ಷಿತ್ ಕೆ ಎಲ್ ಹಾಗೂ ಇವರ ಪೋಷಕರಿಗೂ ಅವಕಾಶ ಲಭಿಸಿದೆ. ಇವರಿಗೆ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

Related posts

ಪೆರಾಜೆ:ಕಾರುಗಳೆರಡರ ನಡುವೆ ಭೀಕರ ಅಪಘಾತ,ಗಾಯಾಳುಗಳು ಸುಳ್ಯ ಆಸ್ಪತ್ರೆಗೆ ದಾಖಲು

ಸಂಪಾಜೆ ಗ್ರಾ. ಪಂ. ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಅವಿರೋಧವಾಗಿ ಆಯ್ಕೆ

ಸಂಪಾಜೆ: ಮಗಳ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ತಂದೆ..!, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು