ಕರಾವಳಿಸುಳ್ಯ

ಸುಳ್ಯ: ಹಳೆಗೇಟು ‘ಗಣೇಶ ಚತುರ್ಥಿ’ ಹೆಸರಿನಲ್ಲಿ ಮದ್ಯದ ಬಾಟಲಿಯ ಬಹುಮಾನದ ಲಕ್ಕಿ ಕೂಪನ್ : ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು,ವಿಚಾರಣೆ ವೇಳೆ ಯುವಕ ಹೇಳಿದ್ದೇನು?

218

ನ್ಯೂಸ್ ನಾಟೌಟ್ : ಸುಳ್ಯದ ಹಳೆಗೇಟು ಗಣೇಶ ಚತುರ್ಥಿ ಎಂಬ ಹೆಸರಿನಲ್ಲಿ ಮದ್ಯದ ಬಾಟಲಿಯ ಬಹುಮಾನವಿರುವ ಲಕ್ಕಿ ಕೂಪನ್ ಗೆ ಸಂಬಂಧಿಸಿದಂತೆ ಈ ಪ್ರಕರಣದ ಆರೋಪಿಯನ್ನ ಪತ್ತೆಹಚ್ಚಿ ಪೊಲೀಸರು ವಿಚಾರಿಸಿದ್ದಾರೆ.

ಈತ ಗಣೇಶ ಹಬ್ಬದ ಹೆಸರಿನಲ್ಲಿ ಲಕ್ಕಿ ಕೂಪನ್ ಮಾಡಿದ್ದು,ಲಕ್ಕಿ ಕೂಪನ್ ನಲ್ಲಿ ಪ್ರಥಮ ಬಹುಮಾನ ಬ್ಲ್ಯಾಕ್ ಆಂಡ್ ವೈಟ್ ಮದ್ಯ ಹಾಗೂ ದ್ವಿತೀಯ ಬಹುಮಾನವಾಗಿ ಒಂದು ಕೇಸ್ ಬಿಯರ್ ಎಂದು ಬಹುಮಾನ ಇರಿಸಿ ಹಂಚಿದ್ದ. ಈ ಲಕ್ಕಿ ಕೂಪನ್ ಗೆ ಸುಳ್ಯ ಪರಿಸರದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.

ಹಿಂದೂ ಧರ್ಮದ ಹಬ್ಬದಲ್ಲಿ ಇಂತಹ ಲಕ್ಕಿ ಕೂಪನ್ ಮಾಡಿದವನ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮಾತ್ರವಲ್ಲ ಈ ಲಕ್ಕಿ ಕೂಪನ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಕೂಡ ಆಗಿತ್ತು.ಇದೀಗ ಈ ಲಕ್ಕಿ ಕೂಪನ್ ಮಾಡಿದವನನ್ನ ಸುಳ್ಯ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಸಂದರ್ಭ ಯುವಕನನ್ನ ಠಾಣೆಗೆ ಕರೆದು ಎಚ್ಚರಿಕೆ ನೀಡಿ ಮುಚ್ಚಳಿಕೆಯನ್ನು ಪೊಲೀಸರು ಬರೆಸಿದ್ದಾರೆ.ಈ ವೇಳೆ ಯುವಕ ತನ್ನ ತಪ್ಪನ್ನ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಇನ್ನು ಮುಂದೆ ಇಂತಹ ತಪ್ಪುಗಳಾಗದಂತೆ ನಡೆದುಕೊಳ್ಳುತ್ತೇನೆ ಎಂದು ಕ್ಷಮೆಯಾಚನೆಯನ್ನೂ ಮಾಡಿದ್ದಾನೆ ಎನ್ನಲಾಗಿದೆ.

https://www.youtube.com/watch?v=pw95EAmlpP8
See also  Oh My God ...! ಟ್ರಾವೆಲ್ ಹಿಸ್ಟರಿ ಇಲ್ಲದ ಮಂಗಳೂರಿನ ಶಾಲೆಯ ಮಕ್ಕಳಿಗೆ ಹೇಗೆ ಬಂತು ಒಮೈಕ್ರಾನ್ ...?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget