ಕೊಡಗುಸುಳ್ಯ

ಸುಳ್ಯ:ಕೊರಗಜ್ಜ ದೈವಸ್ಥಾನದ ಕಾಲಾವಧಿ ನೇಮೋತ್ಸವ,ಆಮಂತ್ರಣ ಪತ್ರಿಕೆ ಬಿಡುಗಡೆ

254

ನ್ಯೂಸ್‌ ನಾಟೌಟ್‌ : ತುಳುನಾಡಿನ ದೈವ ಶಕ್ತಿಗಳಾದ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ,ಗುಳಿಗ ದೈವ,ಕೊರಗಜ್ಜ ದೈವವಿರುವ ಜಯನಗರ ಕೊರಂಬಡ್ಕ ದೈವಸ್ಥಾನದಲ್ಲಿ ಎ.6 ಮತ್ತು 7 ರಂದು ಕಾಲಾವಧಿ ನೇಮೋತ್ಸವ ಅದ್ದೂರಿಯಿಂದ ನಡೆಯಲಿದೆ.ಈ ಹಿನ್ನಲೆಯಲ್ಲಿ ಇದರ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿದೆ.

ಅಯೋಧ್ಯೆ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ದಿನವಾದ ಜ.22 ರಂದು ಈ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು.ನೇಮೋತ್ಸವ ಕಾರ್ಯಕ್ರಮದಲ್ಲಿ ದೈವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿ ವಿನಂತಿಸಿದೆ.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಕೇಶವಹೊಸಗದ್ದೆ, ಕಾರ್ಯದರ್ಶಿ ಸುಂದರ ಕುದ್ಪಾಜೆ,ಸಂಚಾಲಕ ಜಗನ್ನಾಥ. ಜಿ ಜಯನಗರ, ಆಡಳಿತ ಮಂಡಳಿಯ ನಿರ್ದೆಶಕರು,ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರಾದ ಮಂಜುನಾಥ ಬಳ್ಳಾರಿ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಜಯನಗರ ಘಟಕದ ರಮೇಶ್ ಇರಂತಮಜಲು,ಸಚಿನ್ ಕೊಯಿಂಗೋಡಿ, ಪ್ರಶಾಂತ್ ಕುದ್ಪಾಜೆ,ದಯಾನಂದ ಕುದ್ಪಾಜೆ, ಬಾಲಮುರಲಿ ಕುದ್ಪಾಜೆ,ಗೋಪಾಲಕೃಷ್ಣ ಕೊಯಿಂಗೋಡಿ, ಗೋಪಾಲಕೃಷ್ಣ ಭಟ್,ನ.ಪಂ ಸದಸ್ಯೆ ಶಿಲ್ಪಾಸುದೇವ್,ಮಾಜಿ ನ.ಪಂ ಸದಸ್ಯೆ ಜಾನಕಿ ನಾರಾಯಣ,ತನುಜ ಪ್ರದೀಪ್,ನಳಿನಿ ಗೋಪಾಲಕೃಷ್ಣ ಭಟ್,ಸೌಮ್ಯ ಇರಂತಮಜಲು,ರೇವತಿ ಜಯನಗರ,ಜಯಲಕ್ಷ್ಮಿ ಜಯನಗರ ಉಪಸ್ಥಿತರಿದ್ದರು.

See also  ಕಾಂತಮಂಗಲ ಸೇತುವೆಯಿಂದ ಕೆಳಕ್ಕೆ ಹಾರಿದ ಯುವಕ, ಪಯಸ್ವಿನಿ ನದಿಯಲ್ಲಿ ವ್ಯಕ್ತಿಗಾಗಿ ಹುಡುಕಾಟ
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget