ನ್ಯೂಸ್ ನಾಟೌಟ್: ಸ್ಕೂಟಿಯೊಂದಕ್ಕೆ ಬಸ್ಸೊಂದು ಗುದ್ದಿದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟಿರುವ ಘಟನೆ ಸುಳ್ಯದ ಗುತ್ತಿಗಾರು ಬಾಕಿಲ ಎಂಬಲ್ಲಿಂದ ವರದಿಯಾಗಿದೆ.ಬಸ್ಸ್ ಸ್ಕೂಟಿಗೆ ಗುದ್ದಿದ ಬಳಿಕ ಸ್ಕೂಟಿಯನ್ನು ಬಸ್ಸ್ ಒಂದಷ್ಟು ದೂರ ಎಳೆದುಕೊಂಡು ಹೋಗಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಗುತ್ತಿಗಾರಿನ ಆಸುಪಾಸಿನಲ್ಲಿದ್ದವರು ಓಡೋಡಿ ಬಂದಿದ್ದು,ನೂರಾರು ಜನ ಜಮಾಯಿಸಿದ್ದರು. ಸ್ಕೂಟಿ ಗುತ್ತಿಗಾರಿನಿಂದ ಸುಳ್ಯ ಕಡೆ ಬರುತ್ತಿದ್ದು ಎನ್ನಲಾಗಿದ್ದು,ಸ್ಕೂಟಿಯಲ್ಲಿ 65 ವರ್ಷ ಪ್ರಾಯದ ನಾಲ್ಕೂರಿನ ಶಿವರಾಮ ಎಂಬವರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.ಇನ್ನು ಸಹ ಸವಾರೆಯಾಗಿ ಬಾಲಕಿಯೂ ಇದ್ದು ಅವಳಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದೊಯ್ದಿರುವುದಾಗಿ ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.