ಸುಳ್ಯ

ಸುಳ್ಯ:ಸರ್ಕಾರಿ ಹಿ. ಪ್ರಾ. ಶಾಲೆ ಆಲೆಟ್ಟಿ, ನಾರ್ಕೋಡುಗೆ ಶೌಚಾಲಯ ನಿರ್ಮಾಣ;ಸಮುದಾಯ ಸೇವೆ ಯೋಜನೆಯಡಿ 3.50 ಲಕ್ಷ ರೂ. ವೆಚ್ಚದಲ್ಲಿ ಕೆಲಸ ಆರಂಭ

144

ನ್ಯೂಸ್‌ ನಾಟೌಟ್ :ಸುಳ್ಯ ರೋಟರಿ ಸಿಟಿ ವತಿಯಿಂದ ನಾರ್ಕೋಡ್‌ ಶಾಲೆಗೆ ನೂತನ ಶೌಚಾಲಯಕ್ಕೆ ಗುದ್ದಲಿಪೂಜೆಯನ್ನು ನೆರವೇರಿಸಲಾಯಿತು. ಉದ್ಯಮಿ ರೋ ಹೇಮಂತ ಕಾಮತ್ ನೆರವೇರಿಸಿಕೊಟ್ಟರು.

ಈ ಸಂದರ್ಭ ಮಾತನಾಡಿದ ಅವರು ‘ಈ ಸಂಸ್ಥೆಗೆ ರೋಟರಿ ಗವರ್ನರ್ ಭೇಟಿ ಕಾರ್ಯಕ್ರಮದಂದು ಉದ್ಘಾಟನೆ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಅಭಿಪ್ರಾಯ ಪಟ್ಟರು.ಈ ಸಂದರ್ಭ ಗುದ್ದಲಿಪೂಜೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೋ ಗಿರೀಶ್ ನಾರ್ಕೋಡ್ ಅವರು ರೋಟರಿ ಸದಸ್ಯರ ಸಹಕಾರದಿಂದ ಈ ಯೋಜನೆ ರೂಪಿಸಿರುವುದಾಗಿ ಹೇಳಿದರು.

ಮುಖ್ಯ ಅತಿಥಿಯಾಗಿ ದೈಹಿಕ ಶಿಕ್ಷಕಿ ಆಶಾ ನಾಯಕ್ ರೋಟರಿಯ ಕೊಡುಗೆಗೆ ಕೃತಜ್ಞತೆ ಅರ್ಪಿಸಿದರು. ಸುಳ್ಯ ರೋಟರಿಯ ಮಾಜಿ ಅಧ್ಯಕ್ಷ ಜೆ.ಕೆ ರೈ, ಶಾಲಾ ಮುಖ್ಯೋಪಾಧ್ಯಾಯಿನಿ ಸುನಂದ.ಜಿ , ರೋ ಮುಕುಂದ ನಾರ್ಕೋಡ್ , ಸಿಆರ್ ಪಿ ಸವಿತಾ ಜಗದೀಶ್‌, ವಿಕ್ರಮ್ ಯುವಕ ಮಂಡಲದ ಅಧ್ಯಕ್ಷ ವಿನಯ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕ ಸುನಿಲ್ ಸ್ವಾಗತಿಸಿ,ಮುಖ್ಯೋಪಾಧ್ಯಾಯಿನಿ ಸುನಂದ.ಜಿ ವಂದಿಸಿದರು.

See also  ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ಕುರುಂಜಿ ವೆಂಕಟ್ರಮಣ ಗೌಡರ ಪುಣ್ಯಸ್ಮರಣೆ, ಭಾವಚಿತ್ರಕ್ಕೆ ಪುಷ್ಪಾರ್ಚನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget