ಕರಾವಳಿಸುಳ್ಯ

ಸುಳ್ಯ: ಗಣರಾಜ್ಯೋತ್ಸವ ದಿನದಂದು ‘ಗಣರಾಜೋತ್ಸವ ಕವಿಗೋಷ್ಠಿ’; ಚಂದನ ಸಾಹಿತ್ಯ ವೇದಿಕೆಯಿಂದ ಕೃತಿ ಬಿಡುಗಡೆ ಕಾರ್ಯಕ್ರಮ

195

ನ್ಯೂಸ್‌ ನಾಟೌಟ್‌ : ಪ್ರಜಾಪ್ರಭುತ್ವ ಹಾಗೂ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ‘ಗಣರಾಜೋತ್ಸವ ಕವಿಗೋಷ್ಠಿ – ಕೃತಿ ಬಿಡುಗಡೆ’ ಕಾರ್ಯಕ್ರಮವು ಜರುಗಿತು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ, ಚಿತ್ರನಿರ್ದೇಶಕ, ಜ್ಯೋತಿಷಿ ಎಚ್. ಭೀಮರಾವ್ ವಾಷ್ಠರ್ ಅಧ್ಯಕ್ಷತೆ ವಹಿಸಿದ್ದರು.ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸರಕಾರಿ ಬಸ್ ನಿಲ್ದಾಣ ಬಳಿ ಇರುವ ಶಾರದಾ ವಿದ್ಯಾಲಯದಲ್ಲಿ ಈ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭ ಶಾರದಾ ಕಾಲೇಜ್‌ನ ಶಾರದಾ ಮೇಡಂ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಜ್ಜಾವರ ದೇವರಕಳಿಯ ಚೈತನ್ಯ ಸೇವಾಶ್ರಮದ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರು ದಿವ್ಯಸಾನಿಧ್ಯ ವಹಿಸಿದ್ದರು. ಖ್ಯಾತ ಕವಯಿತ್ರಿ ಚಂದ್ರಾವತಿ ಬಡ್ಡಡ್ಕ ಅವರು ಗಣರಾಜ್ಯೋತ್ಸವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಂಕರ ಪೆರಾಜೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರ 199 ನೇ ಕೃತಿ ಅಹಿಂಸಾ ಪರಮೋಧರ್ಮ ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಕಳೆದ 10 ವರ್ಷಗಳಿಂದ ಸುಳ್ಯದಲ್ಲಿ ಶಾರದಾ ವಿದ್ಯಾಲಯ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಶಾರದಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಗಾಯತ್ರಿ ಶೆಟ್ಟಿ, ನಯನ, ಅಫ್ಸಲ್, ಸುಶ್ಮಿತಾ ಕೆ ಎಸ್, ಕೈಫಾ, ನಿಶ್ಚಿತ್, ಗೀತಾ, ಶಾಲಿನಿ ಭಾಗವಹಿಸಿದ್ದರು. ಎಲ್ಲರಿಗೂ ಅಭಿನಂದನಾ ಪತ್ರ ಮತ್ತು ಸಾಹಿತ್ಯ ಕೃತಿ ನೀಡಿ ಗೌರವಿಸಲಾಯಿತು. ಮಾನ್ಯ ಮತ್ತು ತಂಡ ಪ್ರಾರ್ಥಿಸಿದರು. ಭೀಮರಾವ್ ವಾಷ್ಠರ್ ನಿರೂಪಿಸಿದರು.ಶಿಕ್ಷಕಿ ಹೇಮಲತಾ ವಂದಿಸಿದರು.

See also  ಸುಳ್ಯ: ತಡರಾತ್ರಿ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಕಾರು..! ಅಂಗಡಿ ಇಲ್ಲದಿದ್ದರೆ ಸಂಭವಿಸುತ್ತಿತ್ತು ಭಾರಿ ಅನಾಹುತ, ಜಸ್ಟ್ ಮಿಸ್..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget