ಕರಾವಳಿಸುಳ್ಯ

ಸುಳ್ಯ: ಪಕ್ಕದ ಮನೆಯವರ ಜತೆ ಕಾದಾಟ,ಕತ್ತಿಯಿಂದ ಹಲ್ಲೆ;ಇಬ್ಬರಿಗೆ ಗಾಯ

ನ್ಯೂಸ್ ನಾಟೌಟ್ :ನೆರೆಹೊರೆಯ ಮನೆಯವರ ಮಧ್ಯೆ ಮಾತಿಗೆ ಮಾತು ಬೆಳೆದು ಕೊನೆಗೆ ಗಲಾಟೆಯು ಹಲ್ಲೆಯೊಂದಿಗೆ ಅಂತ್ಯವಾದ ಘಟನೆ ಆಲೆಟ್ಟಿ ಗ್ರಾಮದ ಕುಡೆಂಬಿ ಎಂಬಲ್ಲಿ ಸಂಭವಿಸಿದೆ.ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಆಲೆಟ್ಟಿ ಗ್ರಾಮದ ಕುಡೆಂಬಿ ಎಂಬಲ್ಲಿ ಅಕ್ಕ ಪಕ್ಕದಲ್ಲಿಯೇ ಎರಡು ಮನೆಯಿದ್ದು,ಯಾವುದೋ ವಿಚಾರವೊಂದಕ್ಕೆ ಎರಡು ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.ಈ ವೇಳೆ ಗಲಾಟೆಯು ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು,ಕತ್ತಿಯಿಂದ ಹಲ್ಲೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರು ವ್ಯಕ್ತಿಗಳ ಮಧ್ಯೆ ಗಲಾಟೆ ಆರಂಭವಾಗಿದ್ದು,ಪರಸ್ಪರ ಕತ್ತಿಯಿಂದ ಕಡಿದಿದ್ದಾರೆ ಎನ್ನಲಾಗಿದೆ.ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ಮಹಿಳೆಯೋರ್ವರಿಗೂ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

Related posts

ಸುಬ್ರಹ್ಮಣ್ಯ: ಕಾಲೇಜು ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಹರಿದ ಕಾರು, ಮೂವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

ಬಳ್ಳಾರಿಯಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

ಬೆಳ್ತಂಗಡಿ: ದಶಲಕ್ಷ ಗಿಡಗಳ ನಾಟಿ-ಕೋಟಿ ವೃಕ್ಷ ಆಂದೋಲನಕ್ಕೆ ತಣ್ಣೀರುಪಂತ ಪುರುಷರ ಮಜಲು ಮೀಸಲು ಅರಣ್ಯ ಪ್ರದೇಶದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ