ಕರಾವಳಿಸುಳ್ಯ

ಸುಳ್ಯ: ಹಳೆ ದ್ವೇಷದ ಕಾರಣ ತಂದೆ ಮಗನ ಗಲಾಟೆ ಕೊಲೆಯಲ್ಲಿ ಅಂತ್ಯ – ವಾರದ ಹಿಂದೆ ಅಡಿಕೆ ಮರದ ಸಲಾಕೆಯಿಂದ ತಂದೆಗೆ ಹೊಡೆದಿದ್ದ ಮಗ!

ನ್ಯೂಸ್ ನಾಟೌಟ್ : ಹಳೆ ದ್ವೇಷದ ಕಾರಣವೆಂದು ಹೇಳಲಾದ ತಂದೆ -ಮಗನ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಸುಳ್ಯದ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದಲ್ಲಿ ನಡೆದಿದೆ.ಕಳೆದ ಒಂದು ವಾರದ ಹಿಂದೆ ತಂದೆ ಮತ್ತು ಮಗನ ನಡುವೆ ಗಲಾಟೆ ನಡೆದಿದ್ದು, ನಂತರ ಹೊಡೆದಾಟ ನಡೆದಿತ್ತು.ಪರಿಣಾಮ ತಂದೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೇ ತಂದೆ ಮೃತಪಟ್ಟಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.

ತಂದೆ ಕಿಟ್ಟು ಹಾಗೂ ಅವರ ಮೊದಲನೆ ಹೆಂಡತಿಯ ಮಗ ಹರ್ಷಿತ್ ನಡುವೆ ಹಳೆ ವಿಷಯಕ್ಕಾಗಿ ಮಾತಿನ ಚಕಮಕಿ ನಡೆದಿತ್ತು.ನಂತರ ಅದು ಹೊಡೆದಾಟಯಲ್ಲಿಯವರೆಗೆ ಬಂದು ತಲುಪಿತ್ತು.ಈ ವೇಳೆ ರೊಚ್ಚಿಗೆದ್ದ ಮಗ ಹರ್ಷಿತ್ ಅಡಿಕೆ ಮರದ ಸಲಾಕೆಯಿಂದ ತಂದೆಗೆ ಹೊಡೆದಿದ್ದ ಎನ್ನಲಾಗಿದೆ.ತಕ್ಷಣ ಗಾಯಗೊಂಡಿದ್ದ ಕಿಟ್ಟುರವರನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ ಒಂದು ವಾರಗಳಿಂದ ಅವರಿಗೆ ಚಿಕಿತ್ಸೆ ಕೊಟ್ಟರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ನಿತ್ಯಾನಂದರವರು ದೂರು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.

https://www.youtube.com/watch?v=ZoKq8Z7ILlg

Related posts

ಬೆಳ್ತಂಗಡಿ:ಬಸ್-ಇನೋವಾ ಮಧ್ಯೆ ಭೀಕರ ಅಪಘಾತ:ಕಾರಿನಲ್ಲಿದ್ದ ಇಬ್ಬರು ದುರ್ಮರಣ

ಸುಳ್ಯ : ಎನ್ನೆಂಪಿಯುಸಿಯ ವಿದ್ಯಾರ್ಥಿನಿ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆ

ಸುಳ್ಯ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿದ ನಂದಕುಮಾರ್,ಮುಂದಿನ ನಡೆ ಏನು?