ಕರಾವಳಿಸುಳ್ಯ

ಸುಳ್ಯ :ಎನ್ನೆಂಸಿ, ಎನ್.ಎಸ್.ಎಸ್ ಮತ್ತು ಯುವ ರೆಡ್ ಕ್ರಾಸ್ ವತಿಯಿಂದ ‘ಸಂವಿಧಾನ ದಿನಾಚರಣೆ’

ನ್ಯೂಸ್ ನಾಟೌಟ್ : ನೆಹರು ಮೆಮೊರಿಯಲ್ ಕಾಲೇಜು ಸುಳ್ಯ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಮತ್ತು ರೆಡ್ ಕ್ರಾಸ್ ಘಟಕಗಳ ವತಿಯಿಂದ ಸಂವಿಧಾನ ದಿನಾಚರಣೆಯನ್ನು ಕಾಲೇಜು ಸಭಾಂಗಣದಲ್ಲಿ ನ. 26 ರಂದು ಆಚರಿಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರುದ್ರಕುಮಾರ್ ಎಮ್ ಎಮ್ ಸಂವಿಧಾನ ಮಹತ್ವದ ಕುರಿತು ವಿವರಿಸಿದರು. ಈ ವೇಳೆ ನವೆಂಬರ್ 26, 1949 ರಂದು ಸಂವಿಧಾನ ಅಂಗೀಕರಿಸಲಾಗಿ ಪ್ರತಿವರ್ಷ ಈ ದಿನವನ್ನು ಸಂವಿಧಾನ ದಿನಾಚರಣೆಯನ್ನಾಗಿ ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು. ಘಟಕಾಧಿಕಾರಿ ಸಂಜೀವ ಕೆ. ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ದ್ವಿತೀಯ ಕಲಾ ವಿಭಾಗದ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಎನ್ ಎಸ್ ಎಸ್ ಘಟಕಾಧಿಕಾರಿ ಚಿತ್ರಲೇಖ ಕೆ ಎಸ್ ಮತ್ತು ಎಲ್ಲಾ ಸ್ವಯಂಸೇವಕರು ಸಹಕರಿಸಿದರು.

Related posts

ಸುಳ್ಯ:ಹಂದಿ ಮಾಂಸ ಪ್ರಿಯರಿಗೆ ಶಾಕಿಂಗ್ ನ್ಯೂಸ್‌,ಗಗನಕ್ಕೇರಿದ ಬೆಲೆ..!ಕೆಜಿಗೆ ಎಷ್ಟು ಗೊತ್ತಾ?

ಶಾಂತಿ ಕದಡಲು ಯತ್ನಿಸಿದ ಸಮಾಜಘಾತಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಎಸ್. ಅಂಗಾರ

ಬಂಟ್ವಾಳ: ಕಾರಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಕೊಡಗಿನ ವ್ಯಕ್ತಿ ಮೇಲೆ ಹಲ್ಲೆ..! ರಾತ್ರಿ ಹಣ – ಚಿನ್ನ ದೋಚಿ ಪರಾರಿ..!