ಕರಾವಳಿಸುಳ್ಯ

ಸುಳ್ಯ :NMC,ಸಮಾಜ ಕಾರ್ಯ ವಿಭಾಗದಿಂದ ವೃತ್ತಿ ಮಾರ್ಗದರ್ಶನ ಮಾಹಿತಿ ಕಾರ್ಯಕ್ರಮ

248

ನ್ಯೂಸ್ ನಾಟೌಟ್ : ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು,ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯ, ಸಮಾಜ ಕಾರ್ಯ ವಿಭಾಗ,ಗ್ರಾಮ ಪಂಚಾಯತ್ ಅರಂತೋಡು ಇದರ ಸಹಯೋಗದಲ್ಲಿ ವೃತ್ತಿ ಮಾರ್ಗದರ್ಶನ ಮಾಹಿತಿ ಕಾರ್ಯಕ್ರಮವು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಪ್ರಾಂಶುಪಾಲ ರಮೇಶ್ ಎಸ್ ವಹಿಸಿದರು . ಕಾರ್ಯಕ್ರಮದ ಉದ್ಘಾಟನೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್. ಇವರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಡಾ.ಕೆ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಪೆರುವಾಜೆಯ ಸಮಾಜ ಕಾರ್ಯ ವಿಭಾಗ ಉಪನ್ಯಾಸಕ ಕಾಂತರಾಜು ಸಿ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಬೇಕಾದ ಉಪಯುಕ್ತ ಮಾಹಿತಿಗಳನ್ನ ನೀಡಿ ವಿಧ್ಯಾರ್ಥಿಗಳ ಸಂದೇಹಗಳಿಗೆ ಉತ್ತರಗಳನ್ನು ನೀಡಿ ಸಹಕರಿಸಿದರು.

ಆಗಮಿಸಿದ ಅತಿಥಿಗಳನ್ನು ಕುಮಾರಿ ಕುಲಶ್ರೀ ಬಿ. ತೃತೀಯ ಸಮಾಜ ಕಾರ್ಯ ವಿಭಾಗ ಇವರು ಸ್ವಾಗತಿಸಿದರು. ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಭವಿತ್ ಇವರು ವಂದಿಸಿದರು. ನಿರೂಪಣೆಯನ್ನು ತೃತೀಯ ಸಮಾಜ ಕಾರ್ಯ ವಿಭಾಗ ಅಶ್ವಿನಿ ಕೆ.ಜೆ.ನೆರವೇರಿಸಿದರು. ನೆಹರು ಮೆಮೋರಿಯಲ್ ಕಾಲೇಜಿನ ತೃತೀಯ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಕೆ.ಎಲ್. ಅಭಿಷೇಕ್ , ಕೆವಿನ್ ಕಿಶೋರ್ ಇವರು ಸಹಕರಿಸಿ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗವನ್ನು ಪಡೆದರು.

See also  ಸಂಪಾಜೆ: ಸ್ಥಳೀಯರ ನಿದ್ದೆಗೆಡಿಸಿದ ಒಂಟಿ ಸಲಗ, ಧೈರ್ಯ ತುಂಬಿದ ಕೆಪಿಸಿಸಿ ಕಾರ್ಯದರ್ಶಿ ಟಿಎಂ ಶಾಹಿದ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget