ಕರಾವಳಿಸುಳ್ಯ

ಸುಳ್ಯ : ಎನ್ನೆಂಸಿ, ನೇಚರ್ ಕ್ಲಬ್ ವತಿಯಿಂದ ‘ಕಲಾತ್ಮಕತೆಯಲ್ಲಿ ಸಸ್ಯಶಾಸ್ತ್ರ’- ಭಿತ್ತಿ ಚಿತ್ರ ತಯಾರಿ ಸ್ಪರ್ಧೆ

ನ್ಯೂಸ್ ನಾಟೌಟ್ : ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ “ಕಲಾತ್ಮಕತೆಯಲ್ಲಿ ಸಸ್ಯಶಾಸ್ತ್ರ” ವಿಷಯಕ್ಕೆ ಸಂಬಂಧಿಸಿದಂತೆ ಭಿತ್ತಚಿತ್ರ ತಯಾರಿ ಸ್ಪರ್ಧೆ ಅಕ್ಟೋಬರ್ 12 ಗುರುವಾರದಂದು ನಡೆಯಿತು.

ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲಿ ಹಮ್ಮಿಕೊಂಡ ಈ ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಸಮಾಜಶಾಸ್ತ್ರ ಉಪನ್ಯಾಸಕಿ ಮತ್ತು ಎನ್ನೆಸ್ಸೆಸ್ ಘಟಕಾಧಿಕಾರಿ ಚಿತ್ರಲೇಖ ಕೆ.ಎಸ್, ಗಣಿತಶಾಸ್ತ್ರ ಉಪನ್ಯಾಸಕಿ ತೃಪ್ತಿ.ಕೆ ಮತ್ತು ಭೌತಶಾಸ್ತ್ರ ವಿಭಾಗದ ಪ್ರಯೋಗಾಲಯ ಸಹಾಯಕಿ ಸೌಮ್ಯ ನಿರ್ವಹಿಸಿದರು.

ನೇಚರ್ ಕ್ಲಬ್ ಕಾರ್ಯದರ್ಶಿ ಪವಿತ್ರಾಕ್ಷಿ, ಕೋಶಾಧಿಕಾರಿ ಮಧಿವಧಿನಿ, ಸ್ಪರ್ಧಾ ಸಮಿತಿ ಸಂಚಾಲಕಿ ಮಹಿಮಾ, ನವ್ಯಶ್ರೀ, ಸುಕನ್ಯಾ ಮತ್ತು ಕ್ಲಬ್ ನ ಇನ್ನಿತರ ಸದಸ್ಯರು ಸ್ಪರ್ಧೆಯನ್ನು ಆಯೋಜಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ ಮತ್ತು ಉಪನ್ಯಾಸಕರಾದ ಕೃತಿಕಾ ಕೆ.ಜೆ ಮಾರ್ಗದರ್ಶನ ನೀಡಿದರು. ಲ್ಯಾಬ್ ಸಹಾಯಕಿ ಸಿಬ್ಬಂದಿ ಭವ್ಯ ಸಹಕರಿಸಿದರು. ಜೀವವಿಜ್ಞಾನ ಪದವಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಮೀನಿಗೆ ಹಾಕಲು ಕೊಂಡುಹೋದ ಬಲೆಗೆ ತಾನೇ ಸಿಲುಕಿದ್ದೇಗೆ..? ಮುಂಜಾನೆ ಒಬ್ಬಂಟಿಯಾಗಿ ಸಮುದ್ರಕ್ಕೆ ಹೋದವ ಮತ್ತೆ ಬರಲೇ ಇಲ್ಲ..!

“ಪರಶುರಾಮ ಪ್ರತಿಮೆ ನಿರ್ಮಿಸಿ ತಪ್ಪು ಮಾಡಿದೆ” , ರಾಜಕೀಯ ದ್ವೇಷದಿಂದ ಬಡ ಕಲಾವಿದನ ಜೀವನ ಅತಂತ್ರ, ಸುಳ್ಳು ಅಪಪ್ರಚಾರ ಮಾಡಿದ್ರೆ ಯಾರಿಗೆ ಲಾಭ..?

ಸ್ವಚ್ಛ ಭಾರತ್ ಕಲ್ಪನೆಯನ್ನೇ ಮರೆತಿರುವ ಜನ..! ಸುಬ್ರಹ್ಮಣ್ಯ – ಜಾಲ್ಸೂರು ರಾಜ್ಯ ಹೆದ್ದಾರಿಯ ರಸ್ತೆ ಬದಿಯಲ್ಲಿ ಕಸವೋ..ಕಸ