ಕರಾವಳಿಸುಳ್ಯ

ಸುಳ್ಯ:ಹೆಸರಾಂತ ವಸ್ತ್ರಮಳಿಗೆ ಕುಂ ಕುಂ ಫ್ಯಾಶನ್‌ನಲ್ಲಿ ಬಿಗ್ ಸೇಲ್ ಸಂಭ್ರಮ..!,ಗ್ರಾಹಕರಿಗೆ ಬಂಪರ್ ಬಹುಮಾನಗಳನ್ನು ಗೆಲ್ಲುವ ಸದವಕಾಶ ..!

270

ನ್ಯೂಸ್ ನಾಟೌಟ್ : ಸುಳ್ಯದ ಹೆಸರಾಂತ ವಸ್ತ್ರಮಳಿಗೆ ಸುಳ್ಯದ ಮುಖ್ಯರಸ್ತೆಯಲ್ಲಿರುವ ಕಾಂಪ್ಲೆಕ್ಸ್‌ನ ಕುಂ ಕುಂ ಫ್ಯಾಶನ್‌ನಲ್ಲಿ ಬಿಗ್ ಸೇಲ್ ಹಾಗೂ ಮಹಾ ಉತ್ಸವವು ಸೆಪ್ಟೆಂಬರ್ 1 ರಂದು ಚಾಲನೆ ನೀಡಿ ಪ್ರಾರಂಭಿಸಲಾಯಿತು.

ಹೊಸ ಹೊಸ ವಿನ್ಯಾಸದ ಮದುವೆ ಜವುಳಿ ಸೇರಿದಂತೆ ಮಹಿಳೆಯರ,ಪುರುಷರ ಮತ್ತು ಮಕ್ಕಳ ಎಲ್ಲಾ ರೀತಿಯ ಉಡುಪುಗಳನ್ನು ಅತೀ ಕಡಿಮೆ ದರದಲ್ಲಿ ತಮ್ಮದಾಗಿಸುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ಸಮರ್ಪಿಸುತ್ತಿದೆ. ಅಲ್ಲದೆ ಗ್ರಾಹಕರಿಗೆ ಇಷ್ಟವಾಗುವಂತಹ ವಿನ್ಯಾಸದ ಕಲರ್ ಫುಲ್ ಡ್ರೆಸ್ ಕಲೆಕ್ಷನ್‌ಗಳ ಅಪೂರ್ವ ಸಂಗ್ರಹವೇ ಇಲ್ಲಿದ್ದು, ಮನದಿಚ್ಚೆಯ ವಸ್ತ್ರಗಳನ್ನು ಖರೀದಿಸಿ ಸಂಭ್ರಮಿಸಬಹುದು.

ಗ್ರಾಹಕರಿಗಾಗಿ ಈ ವರ್ಷ ಸೆಪ್ಟೆಂಬರ್ 1 ರಂದು ಬಿಗ್ ಸೇಲ್‌ಗೆ ಚಾಲನೆ ನೀಡಿದೆ. ಸಂಸ್ಥೆಯ ಮಾಲೀಕ ಧನ್‌ರಾಮ್ ಪಟೇಲ್ ದೀಪ ಬೆಳಗಿಸಿ ಚಾಲನೆ ನೀಡಿದರು.ಬಳಿಕ ಸುಳ್ಯದ ಸ್ವಚ್ಚತೆಯಲ್ಲಿ ಸದಾ ಕರ್ತವ್ಯ ನಿರ್ವಹಿಸುವ ಸುಳ್ಯ ನಗರ ಪಂಚಾಯತ್‌ನ 19 ಮಂದಿ ಪೌರ ಕಾರ್ಮಿಕರನ್ನು ಸಂಸ್ಥೆಗೆ ಬರ ಮಾಡಿಕೊಂಡು ಗೌರವಿಸಲಾಯಿತು.

150 ದಿನಗಳ ಕಾಲ ಗ್ರಾಹಕರು ಖರೀದಿಸುವ ವಸ್ತ್ರಗಳಿಗೆ ಗಿಫ್ಟ್ ನೀಡುವ ಜೊತೆಗೆ ಸ್ಕ್ರಾಚ್ ಕಾರ್ಡ್ ನೀಡಲಾಗುತ್ತದೆ. 999 ರೂ ಖರೀದಿಗೆ ಸಿಲ್ವರ್ ಕಾರ್ಡ್ , 2499 ರೂ ಖರೀದಿಗೆ ಗೋಲ್ಡ್ ಕಾರ್ಡ್ , 4999 ರೂ. ಖರೀದಿಗೆ ಡೈಮಂಡ್ ಸ್ಕ್ರಾಚ್ ಕಾರ್ಡ್ ನೀಡಲಾಗುತ್ತದೆ. ಅಲ್ಲದೆ ಬಂಪರ್ ಬಹುಮಾನವಾಗಿ ಬೈಕ್, ಸ್ಕೂಟಿ, ಪ್ರಿಜ್, ಟಿ.ವಿ., ವಾಷಿಂಗ್ ಮೆಷಿನ್ ಹಾಗೂ ಆಕರ್ಷಕ ಬಹುಮಾನಗಳು ಇರಲಿವೆ. ಪ್ರತೀ ಖರೀದಿಗೆ ಆಕ‍ರ್ಷಕ ಗಿಫ್ಟ್‌ಗಳು ಇದ್ದು, ಈ ಸುವರ್ಣಾವಕಾಶವನ್ನು ಸದುಪಯೋಗಿಸಿಕೊಳ್ಳಿ ಎಂದು ಸಂಸ್ಥೆಯ ಮಾಲೀಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

See also  ನಾಳೆ (ಡಿ .೬ ) ಸುಳ್ಯ ದಲ್ಲಿ ವಿದ್ಯುತ್ ವ್ಯತ್ಯಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget