ಕರಾವಳಿಸುಳ್ಯ

ಸುಳ್ಯ: ಮತ್ತೊಂದು ಕಳವು ಪ್ರಕರಣ;ಚಾಕಲೇಟ್‌,ಸಿಗರೇಟ್‌ ಸೇರಿದಂತೆ ಕಾಣಿಕೆ ಹುಂಡಿಯಲ್ಲಿದ್ದ ನಗದನ್ನು ಬಿಡದ ಕಳ್ಳರು..!

191

ನ್ಯೂಸ್ ನಾಟೌಟ್ : ಸುಳ್ಯ ಭಾಗದ ಕನಕಮಜಲಿನಲ್ಲಿ ಮತ್ತೆ ಕಳವು ಪ್ರಕರಣ ಬೆಳಕಿಗೆ ಬಂದಿದೆ.ನಿನ್ನೆ ರಾತ್ರಿ ವೇಳೆಗೆ ಅಂಗಡಿ ಬೀಗ ಮುರಿದು ಕಳ್ಳರು ಕೈ ಚಳಕ ಪ್ರದರ್ಶಿಸಿದ್ದಾರೆ.ಅಂಗಡಿಯೊಳಗೆ ನುಗ್ಗಿದ ಖದೀಮರು ಅಂಗಡಿ ಒಳಗಿದ್ದ ಅಂಗಡಿ ಸಾಮಾಗ್ರಿ ಹಾಗೂ ನಗದು ಸೇರಿದಂತೆ ಕಾಣಿಕೆ ಹುಂಡಿಯನ್ನೂ ಕಳವುಗೈದು ಪರಾರಿಯಾಗಿದ್ದಾರೆ.

ಸುಳ್ಯದ ಕನಕಮಜಲಿನ ಮುಖ್ಯರಸ್ತೆಯ ಬಳಿ ಜಂಕ್ಷನ್ ನಲ್ಲಿರುವ ಜನರಲ್ ಸ್ಟೋರ್ ಅಂಗಡಿಗೆ ಒಳನುಗ್ಗಿದ ಕಳ್ಳರು ಅಂಗಡಿ ಒಳಗಿದ್ದ ಚಾಕಲೇಟ್ಸ್‌,ಸುಮಾರು ಆರು ಸಾವಿರ ಮೌಲ್ಯದ ಸಿಗರೇಟು ಪ್ಯಾಕೇಟ್ಸ್,ಅಂಗಡಿಯಲ್ಲಿ ಕಾಣಿಕೆ ಹುಂಡಿಯಲ್ಲಿದ್ದ ನಗದು ಹಾಗೂ ಡ್ರಯರ್‌ನಲ್ಲಿದ್ದ ಸುಮಾರು ಒಂದು ಸಾವಿರ ನಗದು ಕಳವುಗೈದು ಎಸ್ಕೇಪ್ ಆಗಿದ್ದಾರೆ.

ಕಳವು ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.ಕ್ಯಾಮರಾ ಪರಿಶೀಲಿಸಿದಾಗ ಬೈಕಿನಲ್ಲಿ ಇಬ್ಬರು ವ್ಯಕ್ತಿಗಳು ಬಂದು ಕಳವುಗೈದು ಹೋಗುವ ದೃಶ್ಯ ಕೂಡ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ತನಿಖೆ ಮುಂದುವರಿಸಲಾಗಿದೆ.

See also  ಸುಳ್ಯ: ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಡಿ.ಸಿ.ಎಂ ಡಿ.ಕೆ.ಶಿವಕುಮಾರ್‌ ಭೇಟಿಯಾದ ಸುಳ್ಯ ಕಾಂಗ್ರೆಸ್ ನಿಯೋಗ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget