ನ್ಯೂಸ್ ನಾಟೌಟ್:ಇದೀಗ ಮಕ್ಕಳಿಗೆ ಪರೀಕ್ಷೆಗಳು ಆರಂಭಗೊಂಡಿವೆ.ಶಾಲೆಗೆ ರಜೆ ಸಿಗೋ ಕಾಲ ಸನ್ನಿಹಿತವಾಗಿದೆ.ಇದಾದ ಬಳಿಕ ಎಲ್ಲೆಡೆಯೂ ಬೇಸಿಗೆ ಶಿಬಿರಗಳ ಸುಗ್ಗಿ. ಚಿಣ್ಣರು ಪಠ್ಯೇತರ ಚಟುವಟಿಕೆಗಳಲ್ಲಿ ತಲ್ಲೀನರಾಗುವ ಸಮಯ. ಓದಿನಿಂದ ಹೊರಬಂದು ಹವ್ಯಾಸಗಳಿಗೆ ಒತ್ತು ನೀಡುವ ಕಾಲಾವಧಿ ಆರಂಭವಾಗಿದೆ.ಹೀಗಾಗಿ ಮಕ್ಕಳ ಬಣ್ಣ ಬಣ್ಣದ ಕನಸುಗಳಿಗೆ ಬಲ ತುಂಬಲು ಅಂಜಲಿ ಮೊಂಟೆಸ್ಸರಿ ಸಿದ್ಧವಾಗಿದೆ.ಈ ಮೂಲಕ ಚಿಣ್ಣರ ಕನಸುಗಳಿಗೆ ರೆಕ್ಕೆ ಮೂಡಲಿದೆ.
ಹೌದು, ಇದೀಗ ಸುಳ್ಯದ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಸತತ ಮೂರನೇ ವರ್ಷದ “ಚಿಣ್ಣರ ಕಲರವ” ಎ.1 ರಿಂದ ಎ 8 ರವರೆಗೆ ಸುಳ್ಯ ವರ್ತಕ ಸಮುದಾಯ ಭವನ ಅಂಬಟೆಡ್ಕದಲ್ಲಿ ವಿಭಿನ್ನವಾಗಿ ನಡೆಯಲಿದೆ.7 ವರ್ಷದಿಂದ 14 ವರ್ಷದವರೆಗಿನ ನೂರು ಮಕ್ಕಳಿಗೆ ಅವಕಾಶವಿದ್ದು,ಹೆಸರು ನೋಂದಾವಣೆ ಪ್ರಕ್ರಿಯೆ ಈಗಾಗ್ಲೇ ಆರಂಭಗೊಂಡಿದೆ.ಮಾರ್ಚ್ 21 ಕೊನೆಯ ದಿನಾಂಕವಾಗಿದೆ ಎಂದು ತಿಳಿಸಲಾಗಿದೆ.ಶಿಬಿರವು ಬೆಳಗ್ಗೆ 9ರಿಂದ ಸಂಜೆ 4.30ರ ತನಕ ಇರಲಿದೆ.
ಇಲ್ಲಿ ಮಕ್ಕಳಿಗಾಗಿ ಯೋಗ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯಗಳು, ಅಡುಗೆ, ಮೆಹಂದಿ ವಿನ್ಯಾಸ, ಮುಖವರ್ಣಿಕೆ, ಭಜನೆ, ನೃತ್ಯ, ಕಲೆ ಮತ್ತು ಕರಕುಶಲ, ಗಣಿತದೊಂದಿಗೆ ವಿನೋದ, ಇಂಗ್ಲಿಷ್‌ನೊಂದಿಗೆ ವಿನೋದ, ನಾಟಕ, ತಮಾಷೆಯ ಆಟಗಳು, ಟ್ಯಾಲೆಂಟ್ ಶೋ, ಫನ್ ಫಿಂಗರ್ ಪೇಟಿಂಗ್, ಕೊಲಾಜ್, ಸ್ಟೋರಿ ಟೆಲ್ಲಿಂಗ್ ಜಾರ್, ಬೊಂಬೆ ಥಿಯೇಟರ್, ಇಂಡೋರ್ ಟೆಂಟ್, ಆಸಕ್ತಿದಾಯಕ ಒಳಾಂಗಣ ಚಟುವಟಿಕೆಗಳನ್ನು ನಡೆಸಲಾಗುವುದು.
ಆಸಕ್ತರು ಈ ಕೂಡಲೇ ಸಂಪರ್ಕಿಸಿ