ಕರಾವಳಿಸುಳ್ಯ

ಸುಳ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಲಕಪತಿ ದೀದಿಗಳೊಂದಿಗೆ ಸಂವಾದ ಕಾರ್ಯಕ್ರಮ;ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಏಕೈಕ ಲಕಪತಿ ದೀದಿಯಾಗಿ ಆಯ್ಕೆಯಾದ ಮೋಹಿನಿ ಕಲ್ಲುಗುಂಡಿ

ನ್ಯೂಸ್‌ ನಾಟೌಟ್‌ :ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಲಕಪತಿ ದೀದಿಗಳೊಂದಿಗೆ ಸಂವಾದ ಕಾರ್ಯಕ್ರಮ ಮಾ.11ರಂದು ಜರುಗಲಿದ್ದು, ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ಶ್ರೀಮತಿ ಮೋಹಿನಿ ಕಲ್ಲುಗುಂಡಿ ಅವರು ಆಯ್ಕೆಯಾಗಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ನವದೆಹಲಿಯ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ವತಿಯಿಂದ ಈ ಕಾರ್ಯಕ್ರಮ ನಡೆಯಲಿದ್ದು,ತುಂಬಾ ವಿಶೇಷತೆಯಿಂದ ಕೂಡಿರಲಿದೆ.

ಮಹಿಳಾ ಸ್ವಸಹಾಯ ಸಂಘಗಳ ಮೂಲಕ ವಾರ್ಷಿಕ ಒಂದು ಲಕ್ಷಕ್ಕೂ ಅಧಿಕ ಆದಾಯಗಳಿಸುತ್ತಿರುವ ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಒಟ್ಟು 20 ಮಂದಿ ಲಕಪತಿ ದೀದಿ ಮಹಿಳೆಯಲ್ಲಿ ಶ್ರೀಮತಿ ಮೋಹಿನಿ ಅವರು ದ.ಕ. ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

ಶ್ರೀಮತಿ ಮೋಹಿನಿ ಅವರು ಪ್ರಸ್ತುತ ದ.ಕ. ಸಂಪಾಜೆ ಗ್ರಾಮದ ಕೃಷಿ ಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಪಾಜೆ ಗ್ರಾಮದ ಕಲ್ಲುಗುಂಡಿ ಪಂಚಮಿ ಸ್ಟೋರ್ ಮಾಲಕ ವಿಶ್ವನಾಥ ಅವರ ಪತ್ನಿ.

Related posts

ಧೂಮಾವತಿ ದೈವಸ್ಥಾನ ಹೊರೆಕಾಣಿಕೆ ವೇಳೆ ಜ್ಯೂಸ್‌ ಹಂಚಿದ ಮುಸ್ಲಿಮರು!! ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜಿಸಿದ ಹಿಂದೂಗಳು!!

ಉಡುಪಿ: ಶಾಲೆ- ಕಾಲೇಜುಗಳ ರಜೆಯ ನಕಲಿ ಸುತ್ತೋಲೆ ವೈರಲ್..! ಇಲ್ಲಿದೆ ಸಂಪೂರ್ಣ ಮಾಹಿತಿ

ಮಂಗಳೂರು:ಗಾಂಜಾ ಮಾರಾಟ ಪ್ರಕರಣ :ವೈದ್ಯ ವಿದ್ಯಾರ್ಥಿ ಸಹಿತ ಮತ್ತೆ ಮೂವರ ಬಂಧನ