ಸುಳ್ಯ

ಸುಳ್ಯ: ದೊಡ್ಡತೋಟದಲ್ಲಿ ಆಕ್ಟೀವಾ ಪಲ್ಟಿ:ದಂಪತಿಗೆ ಗಾಯ

ನ್ಯೂಸ್ ನಾಟೌಟ್: ಚಲಿಸುತ್ತಿದ್ದ ಆಕ್ಟೀವಾ ಸ್ಕಿಡ್ ಆಗಿ ದಂಪತಿಗೆ ಗಾಯವಾದ ಘಟನೆ ಸುಳ್ಯದ ದೊಡ್ಡತೋಟ ಎಂಬಲ್ಲಿ ನಡೆದಿದೆ. ಸುಳ್ಯದಿಂದ ಗುತ್ತಿಗಾರು ಕಡೆಗೆ ತಮ್ಮ ದ್ವಿಚಕ್ರವಾಹನದಲ್ಲಿ ದೊಡ್ಡತೋಟ ಕಡೆಗೆ ಬರುತ್ತಿದ್ದಂತೆ ಅಲ್ಲಿನ ತಿರುವಿನಲ್ಲಿ ಆಕ್ಟಿವಾ ಪಲ್ಟಿ ಹೊಡೆದಿದೆ.ಪರಿಣಾಮ ದಂಪತಿಗೆ ಗಾಯವಾಗಿದೆ.

ಏನಿದು ಘಟನೆ?

ಗಾಯಳುಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ಮುಂದುವರಿದಿದೆ.ಆಕ್ಟಿವಾದಲ್ಲಿ ಗುತ್ತಿಗಾರಿನ ಮಾಧವ ಹಾಗೂ ಅವರ ಪತ್ನಿ ಗಿರಿಜಾ ಎಂಬುವವರು ಗುತ್ತಿಗಾರಿಗೆ ಪ್ರಯಾಣಿಸುತ್ತಿದ್ದರು.ಈ ವೇಳೆ ಈ ಘಟನೆ ಸಂಭವಿಸಿದೆ.ಸ್ಕೂಟಿ ಪಲ್ಟಿಯಾದ ಪರಿಣಾಮ ಇಬ್ಬರ ಕಾಲಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

Related posts

75ನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಆಟ ಆಡಿ ಗಮನ ಸೆಳೆದ ರಾಜಕಾರಣಿ..!, ಲಾಲೂ ಪ್ರಸಾದ್ ಯಾದವ್ ಅವರು ಫಿಟ್ ಆ್ಯಂಡ್ ಫೈನ್ ಆಗಿರೋದ್ರ ರಹಸ್ಯವೇನು?

ಸ್ವಚ್ಛ ಭಾರತ್ ಕಲ್ಪನೆಯನ್ನೇ ಮರೆತಿರುವ ಜನ..! ಸುಬ್ರಹ್ಮಣ್ಯ – ಜಾಲ್ಸೂರು ರಾಜ್ಯ ಹೆದ್ದಾರಿಯ ರಸ್ತೆ ಬದಿಯಲ್ಲಿ ಕಸವೋ..ಕಸ

ಸುಳ್ಯ:ಅಕ್ರಮ ಮರಳು ದಾಸ್ತಾನು -100 ಲೋಡ್ ಮರಳು ವಶಪಡಿಸಿಕೊಂಡ ಅಧಿಕಾರಿಗಳು