ಕರಾವಳಿಸುಳ್ಯ

ಸುಳ್ಯ : ತೆಂಗಿನ ಮರದಿಂದ ಬಿದ್ದು ಯುವಕ ಮೃತ್ಯು,ಒಂದೇ ಮನೆಯಲ್ಲಿ ತೆಂಗಿನ ಮರದಿಂದ ಬಿದ್ದು ಸಾವನ್ನಪ್ಪಿರುವ ಮೂರನೇ ದುರಂತ !

309

ನ್ಯೂಸ್‌ನಾಟೌಟ್‌:ತೆಂಗಿನ ಕಾಯಿ ಕೀಳುವ ಸಂದರ್ಭ ಯುವಕನೋರ್ವ ಮರದಿಂದ ಬಿದ್ದು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದಿಂದ ವರದಿಯಾಗಿದೆ.ದಾಸನಕಜೆ ಎಂಬಲ್ಲಿಯ ಯುವಕ ತೆಂಗಿನ ಕಾಯಿ ಕೀಳುವ ಸಂದರ್ಭ ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಮೃತಪಟ್ಟಿದ್ದಾರೆ. ಸತೀಶ ಮಣಿಯಾಣಿ ( 35 ವರ್ಷ ) ಮೃತ ದುರ್ದೈವಿ.

ಸತೀಶರವರು ಎಂದಿನಂತೆ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಊಟ ಮುಗಿಸಿ ಅಲ್ಲೇ ಸಮೀಪದ ಎಲಿಮಲೆ ಎಂಬಲ್ಲಿರುವ ಮನೆ ಬಳಿಯಿದ್ದ ತೆಂಗಿನ ಕಾಯಿ ಕೀಳಲು ಮರವೇರಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.ಕೂಡಲೇ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತರಲಾಯಿತು.ಅದಾಗಲೇ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಮೃತ ಸತೀಶ ಮಣಿಯಾಣಿ ಅವರು ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ದಿ| ಶಿವರಾಮ ಮಣಿಯಾಣಿಯವರ ಪುತ್ರರಾಗಿದ್ದು, ಅವಿವಾಹಿತರು ಎಂದು ತಿಳಿದು ಬಂದಿದೆ.ಮೃತರು ತಾಯಿ ಮತ್ತು ಸಹೋದರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ತಂದೆ ಮತ್ತು ಓರ್ವ ಸಹೋದರ ದಿ| ಸತ್ಯನಾರಾಯಣ ಎಂಬವರು ತೆಂಗಿನ ಮರದಿಂದಲೇ ಬಿದ್ದು ಮೃತಪಟ್ಟಿದ್ದು, ಇದೀಗ ಅವರ ಇನ್ನೋರ್ವ ಪುತ್ರ ಸತೀಶ ಕೂಡಾ ತೆಂಗಿನ ಮರದಿಂದ ಬಿದ್ದು ಮೃತಪಟ್ಟಿರುವುದು ಕುಟುಂಬವನ್ನುಘಾಸಿಗೊಳಿಸಿದೆ.

See also  ಕೆವಿಜಿ ಮೆಡಿಕಲ್ ಕಾಲೇಜ್ : ಡಾ.ಪ್ರಮೋದ್ ಪೂಜಾರ್ ಗೆ ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಅವಾರ್ಡ್
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget