ಕರಾವಳಿಕೊಡಗುಸುಳ್ಯ

ಸುಳ್ಯ:ಕಳೆದ ಒಂದು ವರ್ಷಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ನಿಧನ,ಕಣ್ಣೀರಲ್ಲಿ ಕುಟುಂಬ..

316

ನ್ಯೂಸ್ ನಾಟೌಟ್ :ಕಳೆದ ಒಂದು ವರ್ಷಗಳ ಹಿಂದೆ ಗೋಡೆಗೆ ಕಲ್ಲು ಕಟ್ಟುತ್ತಿದ್ದಾಗ ಮೇಲಿಂದ ಕೆಳಕ್ಕೆ ಬಿದ್ದು ವಿಪರೀತ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿ ಜಯನಗರ(48) ಇಂದು ನಿಧನರಾಗಿದ್ದಾರೆ.

ಅವರು ಕಳೆದ ಒಂದು ವರ್ಷಗಳ ಹಿಂದೆ ಗಾಯಗೊಂಡು ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.ಮನೆಯೊಂದರ ಗೋಡೆಗೆ ಕಲ್ಲು ಕಟ್ಟುತ್ತಿದ್ದಾಗ ಮೇಲಿನಿಂದ ಕೆಳಕ್ಕೆ ಬಿದ್ದ ಪರಿಣಾಮ ಸೊಂಟದ ಮೂಳೆ ಮುರಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ನಡೆಯಲೂ ಸಾಧ್ಯವಾಗದ ಹಿನ್ನಲೆ ಇವರ ಕುಟುಂಬದ ನಿರ್ವಹಣೆಯೇ ಕಷ್ಟ ಸಾಧ್ಯವಾಗಿತ್ತು.ಆಸ್ಪತ್ರೆಯಲ್ಲಿದ್ದ ರವಿ ಅವರನ್ನು ಪತ್ನಿ ಹಗಲೆಲ್ಲ ಆರೈಕೆ ಮಾಡಿ ರಾತ್ರಿ ಹೊಟೇಲ್ ಗೆ ಕೆಲಸಕ್ಕೆ ಹೋಗಿ ಜೀವನ ನಡೆಸುತ್ತಿದ್ದರು.ಇವರಿಗೆ ಒಂದು ಗಂಡು ಹಾಗೂ ಒಬ್ಬಳು ಹೆಣ್ಣು ಮಗಳಿದ್ದು,ಜೀವನ ಸಾಗಿಸುವುದೇ ಕಷ್ಟವಾಗಿದೆ.

ರವಿ ಜಯನಗರ ಅವರ ಚಿಕಿತ್ಸೆಗೆ ಹಾಗೂ ಜೀವನ ನಿರ್ವಹಣೆಗೆ ಹಲವು ಮಂದಿ ಸಹಕಾರ ನೀಡಿದ್ದರು.ಅವರು ಮೊದಲಿನಂತಾಗಲೆಂದು ಹಾರೈಸಿದ್ದರು.ಆದರೆ ಇವರ ನಿಧನದ ವಾರ್ತೆ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

See also  ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ CME ಸಭೆ, Neuro Gut Nexus - 2024
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget