ಕರಾವಳಿಕೊಡಗುಸುಳ್ಯ

ಸುಳ್ಯ : ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ,ಮನೆಯಲ್ಲಿ ಯಾರೂ ಇಲ್ಲದ ವೇಳೆ ದುರಂತ

ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬರು ನೇಣು ಬಿಗಿದುಕೊಮಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಪಡ್ಪಿನಂಗಡಿಯಿಂದ ವರದಿಯಾಗಿದೆ. ಎ.20ರಂದು ಸಂಜೆ ವೇಳೆ ಈ ದುರ್ಘಟನೆ ಬೆಳಕಿಗೆ ಬಂದಿದ್ದು, ಪಡ್ಪಿನಂಗಡಿ (ಕಜ್ಜೋಡಿ ತುಪ್ಪದ ಮನೆ) ಸುಬ್ಬಪ್ಪ ಗೌಡ(60) ಮೃತ ವ್ಯಕ್ತಿ.

ಮನೆಯ ಹಿಂಬದಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು,ಸಂಜೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ದುರಂತ ಸಂಭವಿಸಿದೆ.ಸ್ಥಳಕ್ಕೆ ಬೆಳ್ಳಾರೆ ಪೋಲೀಸರು ಆಗಮಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಮೃತರು ಪತ್ನಿ ಶ್ರೀಮತಿ ಕಮಲ, ಪುತ್ರಿ ಶ್ರೀಮತಿ ಹರಿಣಾಕ್ಷಿ ಹರೀಶ್, ಮೊಮ್ಮಗಳು ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.

Related posts

ಬೆಳ್ತಂಗಡಿ : ಮಸೀದಿಗೆ ನುಗ್ಗಿ ಧರ್ಮಗುರುವಿಗೆ 12 ಜನರಿಂದ ಹಲ್ಲೆ..! ಸರ್ಕಾರಿ ಆಸ್ಪತ್ರೆಗೆ ದಾಖಲು

ಕೆವಿಜಿ ಸುಳ್ಯ ಹಬ್ಬದ ಪ್ರಯುಕ್ತ ಡಿ.16ಕ್ಕೆ ಕೆವಿಜಿ ಸಾಧನೆ-ಸಂಸ್ಮರಣೆ, ಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕ ವಿತರಣೆ ಹಾಗೂ ಸ್ಪರ್ಧೆ

ಸುಳ್ಯ:ಪಯಸ್ವಿನಿ ಜೇಸೀಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ;ಅಧ್ಯಕ್ಷರಾಗಿ ಗುರುಪ್ರಸಾದ್ ನಾಯಕ್, ಕಾರ್ಯದರ್ಶಿಯಾಗಿ ಪ್ರಕಾಶ್‌ ಪಿ.ಎಸ್‌.