ಕರಾವಳಿಸುಳ್ಯ

ಸುಳ್ಯ:NMCಯಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಸಂಭ್ರಮ;ಕಾರ್ಯಕ್ರಮದ ಝಲಕ್ ಹೇಗಿತ್ತು? ಇಲ್ಲಿದೆ ವರದಿ..

ನ್ಯೂಸ್ ನಾಟೌಟ್: ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ಇಲ್ಲಿನ ವಿದ್ಯಾರ್ಥಿ ಕ್ಷೇಮಪಾಲನಾ ಘಟಕ ಮತ್ತು ಆಂತರಿಕ ಗುಣಮಟ್ಟ ಖಾತರಿಕೋಶದ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.ಮಾ.೧೨ರಂದು ಕಾಲೇಜಿನ ದೃಶ್ಯ ಶ್ರವಣ ಕೊಠಡಿಯಲ್ಲಿ ಈ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ. ಉಷಾ ಎ. ಮಾತನಾಡಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳಾ ಸಮಾನತೆ, ಕೌಟುಂಬಿಕ ಜವಾಬ್ದಾರಿ ಮತ್ತು ಇನ್ನಿತರ ಪ್ರಾತಿನಿದ್ಯತೆಗಳ ಬಗ್ಗೆ ಮಾತಾನಾಡಿದರು.

ಅಂತಿಮ ವಾಣಿಜ್ಯ ಪದವಿಯ ಕು.ರತ್ನಸಿಂಚನ ಮತ್ತು ಕು.ಕೃತಿಕಾ ಪ್ರಾರ್ಥಿಸಿದರು. ಅಂತಿಮ ವಿಜ್ಞಾನ ಪದವಿ ವಿದ್ಯಾರ್ಥಿನಿ ಕು.ಮದಿವಧಿನಿ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ.ಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂತಿಮ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಕು.ಸುಶ್ಮಿತಾ ವಂದಿಸಿದರು. ವೇದಿಕೆಯಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿಕೋಶದ ಸಂಚಾಲಕಿ ಡಾ.ಮಮತಾ ಕೆ. ಕಾಲೇಜಿನ ವಿದ್ಯಾರ್ಥಿ ಸಂಘದ ಉಪನಾಯಕಿ ಕು.ನಿರೀಕ್ಷಾ ಉಪಸ್ಥಿತರಿದ್ದರು. ಅಂತಿಮ ಪದವಿ ಕಲಾವಿಭಾಗದ ವಿದ್ಯಾರ್ಥಿನಿ ಕು.ಹರ್ಷಿತಾ ಎನ್. ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವೃಂದ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಹಕರಿಸಿದರು.

Related posts

ನಂಗೂ ಫ್ರೀ ನಿಂಗೂ ಫ್ರೀ… CM ಸಿದ್ದರಾಮಯ್ಯ ಎಲ್ಲಿಂದ ತರ್ತಾರೆ ದುಡ್ಡು? ಜನಸಾಮಾನ್ಯರಿಗೆ ಮುಂದೈತೆ ಮಾರಿ ಹಬ್ಬ..?

ಮಡಪ್ಪಾಡಿ ಗ್ರಾಮ ಪಂಚಾಯತ್ ಅಧಿಕಾರಿಯಾಗಿ ರವಿಚಂದ್ರ ಅಧಿಕಾರ ಸ್ವೀಕಾರ

ಸುಳ್ಯ ಸಾಂದೀಪ್ ವಿಶೇಷ ಮಕ್ಕಳ ಶಾಲೆಯ ಸಾಧಕರಿಗೆ ಅಭಿನಂದನೆ