ಕರಾವಳಿಸುಳ್ಯ

ಸುಳ್ಯ:ಕೆವಿಜಿ ಸಮೂಹ ಸಂಸ್ಥೆಗಳು ಆಯೋಜಿಸಿದ್ದ 5 ದಿನಗಳ ವಿಶೇಷ ಯೋಗ ಶಿಬಿರ;ಯೋಗಾಸನ,ಪ್ರಾಣಾಯಾಮ,ಧ್ಯಾನ ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರು..!

ನ್ಯೂಸ್ ನಾಟೌಟ್: ವಿಶ್ವದಾದ್ಯಂತ ಮಹಿಳಾ ದಿನಾಚರಣೆಗಾಗಿ ದಿನಗಣನೆ ಆರಂಭಗೊಂಡಿದೆ. ಈ ದಿನವನ್ನು ವಿಶೇಷವಾಗಿ ಆಚರಿಸಬೇಕು ಎನ್ನುವ ಹಂಬಲದಲ್ಲಿ ಅನೇಕ ಮಹಿಳೆಯರು ಸಿದ್ಧರಾಗಿದ್ದಾರೆ.ಇದೀಗ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಕೆವಿಜಿ ಸಮೂಹ ಸಂಸ್ಥೆ ಕೂಡ ಸತತ 5 ದಿನಗಳ ವಿಶೇಷ ಯೋಗ ಶಿಬಿರವನ್ನು ಆಯೋಜಿಸಿತ್ತು.ಮಾರ್ಚ್‌ ೧ರಂದು ಈ ಯೋಗ ಶಿಬಿರಕ್ಕೆ ಚಾಲನೆ ನೀಡಲಾಗಿದ್ದು, ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಸತತ 5 ದಿನಗಳ ಕಾಲ ವಿಭಿನ್ನವಾಗಿ ನಡೆದ ಯೋಗ ತರಬೇತಿಯಲ್ಲಿ ಹಲವಾರು ಕೆವಿಜಿ ಸಮೂಹ ಸಂಸ್ಥೆಗಳ ಮಹಿಳಾ ಉದ್ಯೋಗಿಗಳು ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡೆದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸುವ ಸಲುವಾಗಿ ಕೆವಿಜಿ ಸಮೂಹ ಸಂಸ್ಥೆಯ ಮಹಿಳಾ ಉದ್ಯೋಗಿಗಳಿಗಾಗಿ ಯೋಗ ತರಬೇತಿ ಕಾರ್ಯಕ್ರಮ ಕೆ.ವಿ.ಜಿ. ಅಯುರ್ವೇದ ಮೆಡಿಕಲ್ ಕಾಲೇಜಿನ ಧನ್ವಂತರಿ ಹಾಲ್‌ನಲ್ಲಿ ಏರ್ಪಡಿಸಲಾಗಿತ್ತು . ಕಾಲೇಜಿನ ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಶಬಿನಾ ವಿಭಿನ್ನವಾಗಿ ತರಬೇತಿ ನೀಡುವುದರೊಂದಿಗೆ ಶಿಬಿರವು ಯಶಸ್ವಿಯಾಗಿ ಮೂಡಿಬರೋದಕ್ಕೆ ಕಾರಣರಾದರು. ಈ ವೇಳೆ ವಿವಿಧ ಯೋಗಾಸನಗಳು, ಪ್ರಾಣಾಯಾಮ ಹಾಗೂ ಧ್ಯಾನ ತರಬೇತಿಯನ್ನು ಪಡೆಯುವುದರ ಮೂಲಕ ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಂಡರು.

Related posts

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಕಾವಿ ತೆಗೆದು ಟೀ ಶರ್ಟ್ ಧರಿಸಿ ಒಡಿಶಾ ರೈಲಿನಲ್ಲಿದ್ದ ಹಾಲಶ್ರೀ ಪೊಲೀಸ್ ಬಲೆಗೆ! ಇಲ್ಲಿದೆ ಪೊಲೀಸರ ರೋಚಕ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ

ಬೆಳ್ತಂಗಡಿ:ಯುವಕನೋರ್ವ ಶಂಕಿತ ರೇಬಿಸ್ ಗೆ ಬಲಿ,೩ ತಿಂಗಳ ಹಿಂದೆ ಮನೆ ನಾಯಿ ಕಡಿದಿದ್ದು,ಮೃತಪಟ್ಟಿತ್ತು

ರಾಸಲೀಲೆ ಅಪಪ್ರಚಾರ ವಿರುದ್ಧ ಮಹಾಲಿಂಗೇಶ್ವರನ ಮೊರೆ ಹೋದ ಮಠಂದೂರು..!