ಕರಾವಳಿ

ಸುಳ್ಯ:ಅಕ್ರಮ ಗೋಸಾಗಾಟ ಪ್ರಕರಣ;ಮೂರು ಜಾನುವಾರು ಸಹಿತ ಓರ್ವನನ್ನು ವಶಪಡಿಸಿಕೊಂಡ ಪೊಲೀಸರು

ನ್ಯೂಸ್‌ ನಾಟೌಟ್‌ : ಅಕ್ರಮವಾಗಿ ಗೋವನ್ನು ಸಾಗಿಸಲಾಗುತ್ತಿದೆ ಅನ್ನುವ ದೂರಿನ ಹಿನ್ನೆಲೆಯಲ್ಲಿ ಸುಳ್ಯ ನಗರ ಬಜರಂಗದಳದ ಕಾರ್ಯಕರ್ತರು ವಾಹನವೊಂದನ್ನು ಸುಳ್ಯದ ಜ್ಯೋತಿ ಸರ್ಕಲ್ ಬಳಿ ತಡೆದು ನಿಲ್ಲಿಸಿದ್ದ ಘಟನೆಯೊಂದು ನಿನ್ನೆ(ಫೆ.25) ವರದಿಯಾಗಿತ್ತು.ಇದೀಗ ಈ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಓರ್ವನನ್ನು ಬಂಧಿಸಲಾಗಿದ್ದು, ಮೂರು ಜಾನುವಾರು ಸಹಿತ ಓರ್ವನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ನಿನ್ನೆ ಚಾಲಕನನ್ನು ವಿಚಾರಿಸಿದಾದ ಕೇರಳ ಮೂಲದವರೆಂದು ಹೇಳಿದ್ದರು ಎನ್ನಲಾಗಿತ್ತು. ಸುಳ್ಯ ಎಸ್.ಐ. ಈರಯ್ಯ ದೂಂತೂರು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಇದೀಗ ಆರೋಪಿ ಸುಲ್ತಾನ್ ಬತ್ತೇರಿಯ ಬಿಬಿನ್ ಪೌಲೋಸ್ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Related posts

ಸುಳ್ಯ : ತೆಂಗಿನ ಮರವೇರಿ ಒಂದೇ ಗ್ರಾಮದ ಇಬ್ಬರು ಯುವಕರು ಬಲಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸೌಜನ್ಯ ನ್ಯಾಯಕ್ಕಾಗಿ ‘ಮೌನ’ ಪ್ರತಿಭಟನೆ, ತೆಂಗಿನ ಕಾಯಿ ಒಡೆದು ದುಷ್ಟರ ಸಂಹಾರಕ್ಕಾಗಿ ಹೆಜ್ಜೆ ಹಾಕಿದ ತಿಮರೋಡಿ

ಸುಳ್ಯ: ರಿಕ್ಷಾದಲ್ಲಿ ಕಳೆದುಹೋಯ್ತು ಅಗತ್ಯ ದಾಖಲೆಗಳಿದ್ದ ಬ್ಯಾಗ್‌,ವಾರೀಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಶಫೀಕ್ ಜಯನಗರ