ಕರಾವಳಿಶಿಕ್ಷಣ

ಸುಳ್ಯ: ಸ್ನೇಹ ಶಾಲೆಯಲ್ಲಿ ಉತ್ಸಾಹದ ಅಂತಾರಾಷ್ಟ್ರೀಯ ಯೋಗ ದಿನ, ಮನಸ್ಸು ಮತ್ತು ದೇಹದ ಒಂದಾಗಿಸುವಿಕೆಗೆ ನಿಜ ಅರ್ಥ ಬಂದಿದ್ದೇಗೆ..?

ನ್ಯೂಸ್ ನಾಟೌಟ್: ರಾಜ್ಯದ ಕನ್ನಡ ಶಾಲೆಗಳ ಪೈಕಿ ವಿಭಿನ್ನವಾಗಿ ನಿಲ್ಲುವ ಶಾಲೆಯೊಂದಿದ್ದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ. ಅನುಭವಿ ಶಿಕ್ಷಣ ತಜ್ಞ ಡಾ. ಚಂದ್ರಶೇಖರ ದಾಮ್ಲೆ ನೇತೃತ್ವದ ಈ ಸ್ನೇಹ ಶಾಲೆಯಲ್ಲಿ ಸೋಮವಾರ (ಜೂ.21)ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ವಿದ್ಯಾರ್ಥಿಗಳು, ಶಿಕ್ಷಕ ಬಳಗ ಎಲ್ಲರೂ ಸೇರಿಕೊಂಡು ಆಚರಿಸಿದರು.

ಇದೇ ವೇಳೆ ಮಾತನಾಡಿದ ಡಾ. ಚಂದ್ರಶೇಖರ ದಾಮ್ಲೆ, ” ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21, 2015 ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿತು. ಅಂದಿನಿಂದ ಯೋಗಕ್ಕೆ ವಿಶ್ವದಾದ್ಯಂತ ಗೌರವ ಸಂದಿದೆ. ಇಂದು ನಾವು ಹತ್ತನೇ ವರ್ಷದ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಯೋಗ ಎಂಬುದು ಮನಸ್ಸು ಮತ್ತು ದೇಹವನ್ನು ಒಂದುಗೂಡಿಸುತ್ತದೆ. ಮುಂಜಾನೆ ಎದ್ದು ನಿತ್ಯ ಅತಿಥಿಯಾದ ಸೂರ್ಯನನ್ನು ಸ್ವಾಗತಿಸುತ್ತ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹಕ್ಕೂ ಮನಸ್ಸಿಗೂ ಚೈತನ್ಯ ದೊರಕುತ್ತದೆ” ಎಂದರು. ಸಂಸ್ಥೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಾಮೂಹಿಕ ಸೂರ್ಯ ನಮಸ್ಕಾರ ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ ಸಂಭ್ರಮಿಸಿದರು.

Related posts

ಕಲ್ಲುಗುಂಡಿ: ಬಿಸಿಲನ್ನೂ ಲೆಕ್ಕಿಸದೆ 15 ದಿನದ ನವಜಾತ ಶಿಶುವಿನೊಂದಿಗೆ ಬಂದು ಮತದಾನ ಮಾಡಿದ ಪತ್ರಕರ್ತೆ, ಸಿಸೇರಿಯನ್ ನೋವಿನಲ್ಲಿದ್ದರೂ ಬಾಣಂತಿಯ ಸೌಜನ್ಯಯುತ ನಡೆ..!

ಸುಳ್ಯ:KVGಯ ಎಲೆಕ್ಟ್ರೀಷಿಯನ್ ವಸಂತ ಕುರುಂಜಿಗುಡ್ಡೆ ನಿಧನ,ಅಂತಿಮ ದರ್ಶನ ಪಡೆದ AOLE ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಹಾಗೂ ಸಿಬ್ಬಂದಿ

ಅಡ್ಕಾರ್: ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು,ಏನಿದು ಘಟನೆ?