ಕರಾವಳಿರಾಜಕೀಯಸುಳ್ಯ

ಮತ್ತಷ್ಟು ರಂಗೇರಿದ ಸುಳ್ಯ ವಿಧಾನಸಭಾ ಚುನಾವಣಾ ಕಣ! ನಾಮಪತ್ರ ಹಿಂಪಡೆದ ಪಕ್ಷೇತರ ಅಭ್ಯರ್ಥಿ!

147

ನ್ಯೂಸ್ ನಾಟೌಟ್: ಸುಳ್ಯ ವಿಧಾನಸಭಾ ಚುನಾವಣಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, 9 ಮಂದಿ ನಾಮಪತ್ರ ಸಲ್ಲಿಸಿದ್ದರು ಅವರಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ಬೂಡುಮಕ್ಕಿ ಸೋಮವಾರ ನಾಮಪತ್ರ ಹಿಂಪಡೆದಿದ್ದಾರೆ. ಈಗ ಉಳಿದ 8 ಮಂದಿ ಅಂತಿಮ ಕಣದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

“ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದೆ. ಆದರೆ ಆರೋಗ್ಯ ಸಮಸ್ಯೆ ಯಿಂದ ನಾನು ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ ಎಂದು ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ ಸತೀಶ್ ಬೂಡುಮಕ್ಕಿ ತಿಳಿಸಿದ್ದಾರೆ

ಉಳಿದಂತೆ ಬಿಜೆಪಿಯಿಂದ ಭಾಗೀರಥಿ ಮುರುಳ್ಯ, ಕಾಂಗ್ರೆಸ್ ನಿಂದ ಕೃಷ್ಣಪ್ಪ, ಜೆಡಿಎಸ್‌ನಿಂದ ಹೆಚ್.ಎಲ್. ವೆಂಕಟೇಶ್, ಎ.ಎ.ಪಿ.ಯಿಂದ ಸುಮನ ಬೆಳ್ಳಾರ್ಕರ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಗಣೇಶ್ ಎಂ, ಉತ್ತಮ ಪ್ರಜಾಕೀಯ ದ ರಮೇಶ್ ಬೂಡು, ಕಲ್ಯಾಣ ರಾಜ್ಯ ಪ್ರಗತಿ ‌ಪಕ್ಷದ ಸುಂದರ ಮೇರ, ಪಕ್ಷೇತರ ಅಭ್ಯರ್ಥಿ ಗುರುವಪ್ಪ ಕಣದಲ್ಲಿದ್ದಾರೆ.

See also  ನಿಮ್ಮ ಕನಸಿನ ಮನೆಯನ್ನು ಬಹುಮಾನವಾಗಿ ಗೆಲ್ಲಬೇಕೆ? ಹಾಗಿದ್ದರೆ ಇಲ್ಲಿದೆ ಸುವರ್ಣಾವಕಾಶ, ಕೇವಲ ಮಾಸಿಕ ಒಂದು ಸಾವಿರ ರುಪಾಯಿಗೆ ನಿಮಗೂ ಗೆಲ್ಲಬಹುದು ಸ್ವಂತ ಮನೆ; ಜೊತೆಗೆ ಐಶಾರಾಮಿ ಕಾರು, ಸುಸಜ್ಜಿತ ಜಾಗ ಹೀಗೆ ಬಹುಮಾನಗಳ ಸುರಿಮಳೆ
  Ad Widget   Ad Widget   Ad Widget   Ad Widget   Ad Widget   Ad Widget