Latestಕ್ರೈಂಸುಳ್ಯ

ಸುಳ್ಯದ ಗೂಡ್ಸ್ ವಾಹನ ಪಿರಿಯಾಪಟ್ಟಣದಲ್ಲಿ ಅಪಘಾತ, 27 ವರ್ಷದ ಯುವಕ ದಾರುಣ ಸಾವು..!

3k
Spread the love

ನ್ಯೂಸ್ ನಾಟೌಟ್: ಸುಳ್ಯದ ವಾಹನವೊಂದು ಪಿರಿಯಾಪಟ್ಟಣದಲ್ಲಿ ವ್ಯಕ್ತಿಯೊಬ್ಬರಿಗೆ ಡಿಕ್ಕಿಯಾದ ಪರಿಣಾಮ 27 ವರ್ಷದ ಯುವಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

ಮೃತ ಪಟ್ಟವರನ್ನು ಹರೀಶ್ (27 ವರ್ಷ) ಎಂದು ಗುರುತಿಸಲಾಗಿದೆ. ಹರೀಶ್ ಮನೆಯಿಂದ ಕೆಲಸಕ್ಕೆಂದು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಅವರ ಕಿಸೆಯಲ್ಲಿದ್ದ ಮೊಬೈಲ್ ರಸ್ತೆಗೆ ಬಿದ್ದಿದೆ. ಬೈಕ್ ನಿಲ್ಲಿಸಿ ಮೊಬೈಲ್ ಹೆಕ್ಕಲು ರಸ್ತೆ ಮಧ್ಯ ಭಾಗಕ್ಕೆ ನಡೆದುಕೊಂಡು ಹೋದ ಸಂದರ್ಭದಲ್ಲಿ ಸುಳ್ಯದ ಸೋಪ್ ಕಂಪೆನಿಯೊಂದರ ಗೂಡ್ಸ್ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪಿರಿಯಾಪಟ್ಟಣದಿಂದ ಕುಶಾಲನಗರದತ್ತ ತೆರಳುತ್ತಿದ್ದ ಈ ಗೂಡ್ಸ್ ವಾಹನ ಗುದ್ದಿದ ಪರಿಣಾಮ ಆತನ ತಲೆಗೆ ಗಂಭೀರ ಗಾಯಗೊಂಡು ಸಾವಿಗೀಡಾಗಿದ್ದಾನೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಗೂಡ್ಸ್ ವಾಹನ ಚಾಲಕ ಶರಣಾಗಿದ್ದಾನೆ. ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

See also  3 ಮಕ್ಕಳನ್ನು ಬಾಡಿಗೆ ಮನೆಯಲ್ಲಿ ಬಿಟ್ಟು ಪ್ರಿಯಕರನೊಂದಿಗೆ ಆಕೆ ಪರಾರಿ..! 25 ವರ್ಷದ ಯುವಕನ ಜೊತೆ 40ರ ಮಹಿಳೆಯ ಲವ್ವಿಡವ್ವಿ..!
  Ad Widget   Ad Widget   Ad Widget