ಕರಾವಳಿ

ಸುಳ್ಯ: ಹೆದ್ದಾರಿಗೆ ಬಿದ್ದ ತೆಂಗಿನಮರ, ವಾಹನಕ್ಕೆ ಹಾನಿ

596

ಸುಳ್ಯ: ಇಲ್ಲಿನ ಮುಖ್ಯ ರಸ್ತೆಯಲ್ಲಿ ಹಳೆಯ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಒಣಗಿದ ತೆಂಗಿನ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ರಸ್ತೆಯಲ್ಲಿ ಸಂಚರಿಸುತ್ತಿದ್ದ ತಮಿಳುನಾಡು ಮೂಲದ ವಾಹನಕ್ಕೆ ತಾಗಿ ಹಾನಿಯಾಗಿದೆ.

ಮರ ಬೀಳುವ ವೇಳೆಯಲ್ಲಿ ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದಲ್ಲಿ ಪ್ರಾಣ ಹಾನಿಯಾಗುವ ಸಾಧ್ಯತೆ ಇತ್ತು ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದರು. ತೆಂಗಿನ ಮರ ಕೆಲ ಸಮಯಗಳಿಂದ ಸತ್ತು ಒಣಗಿದ ಸ್ಥಿತಿಯಲ್ಲಿತ್ತು. ಆದರೆ ಇಲ್ಲಿಯ ತನಕ ಅದನ್ನು ಕಡಿಯದೆ ಬಿಟ್ಟಿದ್ದು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರ ಪಕ್ಕದಲ್ಲಿ ಇನ್ನೊಂದು ತೆಂಗಿನ ಮರವೂ ಒಣಗಿದ್ದು ಬೀಳುವ ಸ್ಥಿತಿಯಲ್ಲಿದೆ. ಶೀಘ್ರವಾಗಿ ಅದನ್ನು ತೆರವುಗೊಳಿಸಿ ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳ ಬೇಕಾಗಿದೆ.

See also  ನೌಕಾನೆಲೆ ಬಳಿ GPS ಟ್ರ್ಯಾಕರ್ ಹೊಂದಿದ್ದ ರಣಹದ್ದು ಪತ್ತೆ..! ಬೇಹುಗಾರಿಕೆಗಾಗಿ ಬೇರೆ ದೇಶದಿಂದ ಬಂದಿದೆಯಾ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget