ನ್ಯೂಸ್ ನಾಟೌಟ್: ಸುಳ್ಯದ ಗಾಂಧಿನಗರದಿಂದ ಪೈಚಾರ್ ಮೂಲಕ ಅಟೋ ರಿಕ್ಷಾ ಚಲಿಸುತ್ತಿದ್ದ ವೇಳೆ ಸ್ಕೂಟರ್ ಗುದ್ದಿದ ಘಟನೆ ನಡೆದಿದೆ.
ಘಟನೆಯಲ್ಲಿ ಮೀನು ಮಾರುಕಟ್ಟೆ ಬಳಿ ಒಳದಾರಿಯಿಂದ ಬಂದ ಸ್ಕೂಟರ್ ಗುದ್ದಿದ ಪರಿಣಾಮ ರಿಕ್ಷಾ ಪಲ್ಟಿಯಾಗಿದೆ. ಮಹಿಳೆಯರು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರು.
ಇದೇ ವೇಳೆ ತನ್ನ ಮೇಲಿನ ಆರೋಪವನ್ನು ಮಹಿಳೆ ನಿರಾಕರಿಸಿದ್ದಾರೆ. ರಿಕ್ಷಾವೇ ವೇಗವಾಗಿ ಬಂದು ನಿಯಂತ್ರಣ ಕಳೆದುಕೊಂಡು ಸ್ಕೂಟಿಗೆ ಗುದ್ದಿದೆ ಎಂದು “ನ್ಯೂಸ್ ನಾಟೌಟ್” ಗೆ ಕರೆ ಮಾಡಿ ಮಹಿಳೆ ಸ್ಪಷ್ಟನೆ ನೀಡಿದ್ದಾರೆ.