ಕರಾವಳಿಸುಳ್ಯ

ಸುಳ್ಯ: ದ. ಕ. ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ನಾಳೆ ಸುಳ್ಯಕ್ಕೆ ಆಗಮನ,ಪ್ರಮುಖರ ಮನೆಗೆ ಭೇಟಿ,ಕಾರ್ಯಕ್ರಮಗಳಲ್ಲಿ ಭಾಗಿ

ನ್ಯೂಸ್‌ ನಾಟೌಟ್‌: ದಕ್ಷಿಣ ಕನ್ನಡದಿಂದ ಬಿಜೆಪಿಯಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ನಾಳೆ ಬೆಳಿಗ್ಗೆ ಸುಳ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಬೆಳಗ್ಗೆ 8 ಗಂಟೆಗೆ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ, ಹಳೆ ಬಸ್‌ ನಿಲ್ದಾಣದಲ್ಲಿರುವ ಡಾ.ಕೆವಿಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ಸುಳ್ಯದ ಪ್ರಮುಖರಾದ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಡಾ. ಚಿದಾನಂದ ಕೆ.ವಿ., ಡಾ.ರೇಣುಕಾಪ್ರಸಾದ್ ಕೆ.ವಿ. ಯವರಲ್ಲಿಗೆ ಭೇಟಿ ನೀಡಲಿದ್ದು,ಬಳಿಕ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿರುವ ಬಿಜೆಪಿ ಕಚೇರಿಗೆ ಬೆಳಿಗ್ಗೆ ೧೦ಕ್ಕೆ ಭೇಟಿ ನೀಡಿ ಚುನಾವಣಾ ಕಚೇರಿ ಉದ್ಘಾಟಿಸಲಿದ್ದಾರೆ.

ನಂತರ ಆಲೆಟ್ಟಿ, ಅಜ್ಜಾವರ, ಸುಳ್ಯ ಮಹಾಶಕ್ತಿಕೇಂದ್ರಗಳ ಕಾರ್ಯಕರ್ತರ ಸಭೆ ನಡೆಯಲಿದೆ.ಮಾಜಿ ಸಚಿವ ಎಸ್.ಅಂಗಾರರ ಮನೆಗೆ ಭೇಟಿ ಸೇರಿದಂತೆ ಹಿರಿಯರಾದ ಚಂದ್ರಶೇಖರ ತಳೂರು ಮನೆಗೆ ಭೇಟಿ ನೀಡಲಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಸಂಪುಟ ನರಸಿಂಹ ಮಠಾಧೀಶರ ಭೇಟಿ ಬಳಿಕ ಸುಬ್ರಹ್ಮಣ್ಯ, ಗುತ್ತಿಗಾರು ಮಹಾಶಕ್ತಿಕೇಂದ್ರ ಕಾರ್ಯಕರ್ತರ ಸಭೆ ನಡೆಯಲಿದೆ.

ಡಾ. ರಾಮಯ್ಯ ಭಟ್ ಪಂಜ, ಶಾಸಕಿ ಭಾಗೀರಥಿ ಮುರುಳ್ಯ ಮನೆ ಭೇಟಿ, ಅಪರಾಹ್ನ ಕೊಯಿಲದಲ್ಲಿ ನೆಲ್ಯಾಡಿ, ಕಡಬ, ಬೆಳಂದೂರು ಶಕ್ತಿಕೇಂದ್ರ ಕಾರ್ಯಕರ್ತರ ಸಭೆ ನಡೆಯಲಿದೆ. ಹಿರಿಯರಾದ ದಿವಾಕರ ರಾಮಕುಂಜ ಮನೆ ಭೇಟಿ, ಅಣ್ಣಾ ವಿನಯಚಂದ್ರರ ಮನೆ ಭೇಟಿ, ಸಂಜೆ ಪೆರುವಾಜೆ ಜೆಡಿ ಆಡಿಟೋರಿಯಂ ನಲ್ಲಿ ಬೆಳ್ಳಾರೆ ಮಹಾಶಕ್ತಿಕೇಂದ್ರ ಕಾರ್ಯಕರ್ತರ ಸಭೆ ನಡೆಯಲಿದೆ. ಬಳಿಕ ಉಪೇಂದ್ರ ಕಾಮತ್ ವಿನೋಬಾನಗರ ಮನೆ ಭೇಟಿ, ನ.ಸೀತಾರಾಮರ ಮನೆ ಭೇಟಿ ಕಾರ್ಯಕ್ರಮ ಇದೆಯೆಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ.

ದ. ಕ. ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರ ಕುರಿತಾದ ವಿಡಿಯೋ ವರದಿ ಇಲ್ಲಿದೆ ನೋಡಿ👇

Follow us for more updates:

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut Website :https://newsnotout.com/

Related posts

ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗರಿಂದ ಸಭ್ಯತೆ ಮೀರುವ, ಗೌರವ ಕೆಡಿಸುವ ಯತ್ನ: ವಿ.ಸುನಿಲ್‌ ಕುಮಾರ್‌

ಸುಳ್ಯದಲ್ಲಿ ಗಾಂಧಿ ಸ್ಮೃತಿ ಯಶಸ್ಸಿನ ಹಿನ್ನೆಲೆ, ಜನಜಾಗೃತಿ ವೇದಿಕೆಯ ಅಧ್ಯಕ್ಷರು, ಪದಾಧಿಕಾರಿಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಗೌರವಾರ್ಪಣೆ

ಬೆಳ್ಳಾರೆ: ಹಾವು ಕಚ್ಚಿ ಮಹಿಳೆ ಸಾವು, ಗುತ್ತಿಗಾರು ಪ್ರಕರಣ ಮಾಸುವ ಮೊದಲೇ ಮತ್ತೊಂದು ಅವಘಡ