ವೈರಲ್ ನ್ಯೂಸ್ಸುಳ್ಯ

ಸುಳ್ಯ : NMPUC ನಲ್ಲಿ ಶಿಕ್ಷಕ-ರಕ್ಷಕರ ಸಭೆ, ಮಕ್ಕಳ ಕಲಿಕೆ ಪ್ರಗತಿಯ ಬಗ್ಗೆ ಚರ್ಚೆ

179

ನ್ಯೂಸ್ ನಾಟೌಟ್ : ಸುಳ್ಯದ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ಡಿ.2 ರಂದು ಶಿಕ್ಷಕ-ರಕ್ಷಕರ ಸಭೆ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ಪಿ ರೈ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪದವಿ ವಿಭಾಗದ ಪ್ರಾಂಶುಪಾಲ ಪ್ರೊ. ರುದ್ರ ಕುಮಾರ್ ಎಂ. ಎಂ, ಕಾಲೇಜಿನ ಶೈಕ್ಷಣಿಕ ಸಲಹೆಗಾರ ಚಂದ್ರಶೇಖರ ಪೇರಾಲ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಮತ್ತು ಕಲಿಕಾ ಪ್ರಗತಿಗೆ ಪೂರಕ ಅಂಶಗಳು, ಶಿಕ್ಷಕರ ಪೋಷಕರ ಜವಾಬ್ದಾರಿ, ಮಾರ್ಗದರ್ಶನದ ಕುರಿತಾಗಿ ಅವರು ಮಾತನಾಡಿದರು. ಪೋಷಕರು ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅಂಬಿಕಾ ಮತ್ತು ಬಳಗದವರು ಆಶಯ ಗೀತೆ ಹಾಡಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ .ಎಂ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಸಾವಿತ್ರಿ ಕೆ .ವಂದಿಸಿದರು. ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ. ಬಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿ, ಪೋಷಕರೊಂದಿಗೆ ಸಂವಾದ ನಡೆಯಿತು.

See also  ಕರ್ನಾಟಕದ ವಿಜಯಪುರದಲ್ಲಿ ಕೇಳಿಬಂದ ಭಾರಿ ಶಬ್ದ..! ಭೂಕಂಪವೆಂದು ಬೆಚ್ಚಿದ ಜನ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget