ಕರಾವಳಿ

ಸುಳ್ಯ ತಾಲೂಕು ಕ್ರೀಡಾಕೂಟ ಯಶಸ್ವಿ ಹಿನ್ನೆಲೆ, ಸಂತ ಜೋಸೆಫ್ ಶಾಲೆಯಿಂದ ಧನ್ಯವಾದ ಸಮರ್ಪಣೆ

240

ನ್ಯೂಸ್ ನಾಟೌಟ್: ಇತ್ತೀಚೆಗೆ ಸುಳ್ಯದಲ್ಲಿ ಆಯೋಜಿಸಿದ್ದ ತಾಲೂಕು ಕ್ರೀಡಾಕೂಟ ಯಶಸ್ವಿಯಾದ ಹಿನ್ನೆಲೆಯಲ್ಲಿ ಸಂತ ಜೋಸೆಫ್ ಶಾಲೆ ವತಿಯಿಂದ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸಹಕಾರ ನೀಡಿದ ಸಮಿತಿ ಸದಸ್ಯರಿಗೆ, ಪೋಷಕರಿಗೆ, ಶಿಕ್ಷಕರಿಗೆ ಹಾಗೂ ಶಾಲಾ ಸಿಬ್ಬಂದಿಗೆ ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರುಗಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಫಾ ವಿಕ್ಟರ್ ಡಿಸೋಜಾ ವಹಿಸಿದ್ದರು. ಶಾಲಾ ಪೋಷಕರ ಸಂಘದ ಅಧ್ಯಕ್ಷ ಜೆಕೆ ರೈ, ಪ್ರೌಢಶಾಲಾ ಪೋಷಕರ ಸಂಘದ ಅಧ್ಯಕ್ಷ ಗುರುಸ್ವಾಮಿ, ದೈಹಿಕ ಶಿಕ್ಷಕ ಸೂಫಿ ಪೆರಾಜೆ, ಮುಖ್ಯ ಶಿಕ್ಷಕ ಸಿ.ಬಿ.ನೋಮ, ಸಿ ಆಂಟನಿ ಮೇರಿ, ನಪ ಸದಸ್ಯ ಡೇವಿಡ್ ಕ್ರಾಸ್ತ, ನವಿನ್ ಮಚಾದೊ, ದೈಹಿಕ ಶಿಕ್ಷಕ ಕೊರಗಪ್ಪ, ಉಮೇಶ್ ಪುಷ್ಪವೇಣಿ, ನಿಹಾಲ್ ಮತ್ತಿತರರು ಉಪಸ್ಥಿತರಿದ್ದರು.

See also  ಕಾಂಗ್ರೆಸ್ ಸರಕಾರದ 'ಶಕ್ತಿ' ಯೋಜನೆಗೆ ಖಾವಂದರ ಮೆಚ್ಚುಗೆ:ಸದನದಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪತ್ರ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget