ಕರಾವಳಿಕೃಷಿ ಸಂಪತ್ತುಸುಳ್ಯ

ಸುಳ್ಯ ತಾಲೂಕು ಮಟ್ಟದ ‘ಶ್ರೇಷ್ಠ ಕೃಷಿಕ ಪ್ರಶಸ್ತಿ’,ಗೋವಿಂದ ನಾಯ್ಕರಿಗೆ ಪ್ರದಾನ

ನ್ಯೂಸ್ ನಾಟೌಟ್ : ಕರ್ನಾಟಕ ಸರಕಾರದ ಕೃಷಿ ಇಲಾಖೆ ಸುಳ್ಯ ತಾಲೂಕು ಇದರ ಆತ್ಮ ಯೋಜನೆಯ 2022-23ನೇ ಸಾಲಿನ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಸುಳ್ಯದ ಎ ಪಿ ಎಂ ಸಿ ಸಭಾಂಗಣದಲ್ಲಿ ನಡೆಯಿತು.

ರೈತ ದಿನಾಚರಣೆ ಪ್ರಯುಕ್ತ ನಡೆದ ಈ ಕಾರ್ಯಕ್ರಮದಲ್ಲಿ ಜೇನು ಕೃಷಿಯಲ್ಲಿ ಸಾಧಿಸಿದ ಅಪೂರ್ವ ಸಾಧನೆಗಾಗಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಪ್ರಗತಿಪರ ಕೃಷಿಕ ದುಗ್ಗಲಡ್ಕದ ಗೋವಿಂದ ನಾಯ್ಕ ಕಲ್ಮಡ್ಕರವರಿಗೆ ನೀಡಿ ಗೌರವಿಸಲಾಯಿತು.ಅನ್ನದಾತರನ್ನು ಪ್ರೋತ್ಸಾಹಿಸುವ ಹಾಗೂ ಮಾದರಿ ಬೇಸಾಯ ಕ್ರಮ ಕೈಗೊಂಡ ರೈತ ಗುಂಪುಗಳನ್ನು ಬೆನ್ನು ತಟ್ಟುವ ಉದ್ದೇಶದಿಂದ ಈ ಸಮಾರಂಭ ನಡೆದಿದ್ದು, ಸುಧಾರಿತ ಬೇಸಾಯ ಕ್ರಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ.

ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕ ಮಾಜಿ ಎ ಪಿ ಎಂ ಸಿ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ, ಸುಳ್ಯ ಕೃಷಿ ಉತ್ಪಾದಕ ಕಂಪನಿಯ ಅಧ್ಯಕ್ಷ ವೀರಪ್ಪ ಗೌಡ, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ನಾಗರಾಜ್, ತೋಟಗಾರಿ ಅಧಿಕಾರಿಕಾ ಅರಬಣ್ಣ ನಾಯ್ಕ, ಪಶು ವೈದ್ಯಕೀಯ ಅಧಿಕಾರಿ ನಿತಿನ್ ಪ್ರಭು, ಸಂಪನ್ಮೂಲ ವ್ಯಕ್ತಿ ಶ್ವೇತ ಕಾನಾವು, ನಿವೃತ್ತ ಕೃಷಿ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಗತಿಪರ ಕೃಷಿಕರು, ಕೃಷಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಕ್ರಿಕೆಟ್‌ ಆಡುವ ವೇಳೆ ಮಹಾಯಡವಟ್ಟು..!ಜೇನುಗೂಡಿಗೆ ತಾಗಿದ ಬಾಲ್,ಜೇನು ನೊಣ ದಾಳಿಗೆ ಎದ್ನೋ ಬಿದ್ನೋ ಓಟಕ್ಕಿತ್ತ ಆಟಗಾರರು..!

‘ಸೌಜನ್ಯ ಪ್ರಕರಣ ಸರಿಯಾಗಿ ತನಿಖೆ ನಡೆದಿಲ್ಲ’ ಮಕ್ಕಳ ವಿಶೇಷ ನ್ಯಾಯಾಲಯ ಅಭಿಪ್ರಾಯ

ಪುತ್ತೂರು: ತಡರಾತ್ರಿ ಕಲ್ಲೇಗ ಟೈಗರ್ಸ್ ಹುಲಿ ಕುಣಿತ ತಂಡದ ನಾಯಕನ ಕೊಚ್ಚಿ ಕೊಲೆ..! ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು