ನ್ಯೂಸ್ ನಾಟೌಟ್: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯನ್ನು ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ ಕಟು ಪದಗಳಿಂದ ಟೀಕಿಸಿದೆ.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ಹಿಂದೂ ಸಮಾಜಕ್ಕೆ ರಕ್ಷಣೆ ಇಲ್ಲ, ಗ್ಯಾರಂಟಿ ಹೇಳಿಕೊಂಡು ಜೀವಕ್ಕೆ ಗ್ಯಾರಂಟಿ ಇಲ್ಲ ಅನ್ನುವ ಪರಿಸ್ಥಿತಿಯನ್ನು ಸಿದ್ದು ಸರ್ಕಾರ ಮಾಡುತ್ತಿದೆ. ಪ್ರಾಮಾಣಿಕ ಕಾರ್ಯಕರ್ತನ ಕೊಲೆ ಮಾಡಿರುವುದು ಜಿಹಾದಿ ಶಕ್ತಿ ಇರಬಹುದು, ಇಂದು ಸಮಾಜ ಎಚ್ಚೆತ್ತುಕೊಂಡಿದೆ, ಕೋಟ್ಯಂತರ ಮಂದಿ ಕಾರ್ಯಕರ್ತರು ಇದ್ದಾರೆ. ಈ ಒಂದು ಸುಳ್ಯದ ಬಂದ್ ಗೆ ಕರೆ ಕೊಟ್ಟಿದ್ದೇವೆ, ಸುಳ್ಯದ ಜನ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ಅಧ್ಯಕ್ಷ ಶ್ರೀ ಕಾಂತ್ ಮಾವಿನ ಕಟ್ಟೆ ಮಾತನಾಡಿ, ಸಂಘ ಪರಿವಾರ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು. ವಿಹಿಂಪ ಮುಖಂಡ ಸೋಮಶೇಖರ ಪೈಕ ಮಾತನಾಡಿ, ಸುಳ್ಯ ತಾಲೂಕಿನಾದ್ಯಂತ ಗ್ರಾಮಗಳಲ್ಲಿ ಪರಿವಾರ ಸಂಘಟನೆ ವತಿಯಿಂದ ಸಂಜೆ ತನಕ ಬಂದ್ ಗೆ ಕರೆ ನೀಡಿದ್ದೇವೆ, ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದರು.
View this post on Instagram
ಬಿಜೆಪಿ ಮುಖಂಡ ಹರೀಶ್ ಕಂಜಿಪಿಲಿ, ಇಂತಹ ಘಟನೆ ನಡೆದಿರುವುದು ದುರಾದೃಷ್ಟಕರ, ಇದನ್ನು ಬಿಜೆಪಿ ಹಾಗೂ ಪರಿವಾರ ಸಂಘಟನೆ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.