ಸುಳ್ಯ

ಸುಳ್ಯ: ಅಸೌಖ್ಯದಿಂದ ಕೊನೆಯುಸಿರೆಳೆದ 1 ನೇ ತರಗತಿಯ ಬಾಲಕ..!, ಬಾಳಿ ಬದುಕ ಬದುಕಬೇಕಾಗಿದ್ದ ವಿದ್ಯಾರ್ಥಿಯ ಬದುಕನ್ನೇ ಮುಗಿಸಿದ ಅನಾರೋಗ್ಯ

ನ್ಯೂಸ್ ನಾಟೌಟ್ : ಬಾಳಿ ಬದುಕಬದುಕಬೇಕಾಗಿದ್ದ ವಿದ್ಯಾರ್ಥಿಯೋರ್ವ ಅನಾರೋಗ್ಯಕ್ಕೆ ಸುತ್ತಾಗಿ ಕೊನೆಯುಸಿರೆಳೆದ ಘಟನೆ ಸುಳ್ಯ ತಾಲೂಕಿನಿಂದ ವರದಿಯಾಗಿದೆ.

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ವಿಲಾಸ್ ಟಿ. ಎಂಬ ಬಾಲಕ ಮೃತಪಟ್ಟಿದ್ದಾನೆ. ಈತ ದೇವಚಳ್ಳ ಗ್ರಾಮದ ತಳೂರಿನ ಚಂದ್ರಶೇಖರ ಎಂಬವರ ಪುತ್ರ. ದೇವಚಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಂದು ಬೆಳಗ್ಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮೃತ ಬಾಲಕ ತಂದೆ, ತಾಯಿ ಮೋಹಿನಿ ಚಂದ್ರಶೇಖರ ತಳೂರು, ಸಹೋದರಿಯನ್ನು ಅಗಲಿದ್ದಾನೆ.

Related posts

ಸಂಪಾಜೆ:ಜೇನು ತೆಗೆಯಲೆಂದು ಹೋದ ಯುವಕನ ಬಾಳಲ್ಲಿ ವಿಧಿಯಾಟ,ಮರದಿಂದ ಕೆಳಕ್ಕೆ ಬಿದ್ದು ಮೃತ್ಯು

ಅಂಕತ್ತಡ್ಕದಲ್ಲಿ ಪ್ರವೀಣ್ ನೆಟ್ಟಾರು ಸ್ಮರಣಾರ್ಥ ವೀರ ಸಾವರ್ಕರ್ ವೃತ್ತ ಉದ್ಘಾಟನೆ

ಆದೂರು ಕುಂಟಾರು ಬಳಿ ಭೀಕರ ಅಪಘಾತ, ಅಜ್ಜಾವರದ ವ್ಯಕ್ತಿ ದಾರುಣ ಸಾವು