ಸುಳ್ಯ

ಸುಳ್ಯದಲ್ಲಿ ಶಾಲೆ ಮಕ್ಕಳಿಗೆ ಬೌ..ಬೌ ಕಾಟ, ಬೀದಿನಾಯಿಗಳ ಹಾವಳಿಯಿಂದ ಹೈರಾಣಾಗುತ್ತಿರುವ ವಿದ್ಯಾರ್ಥಿಗಳು, ದಾರಿ ಹೋಕರು

ನ್ಯೂಸ್ ನಾಟೌಟ್: ಸುಳ್ಯ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳು, ದಾರಿಯಲ್ಲಿ ನಡೆದುಕೊಂಡು ಹೋಗುವವರಿಗೆ ದೊಡ್ಡ ತಲೆ ನೋವಾಗಿದೆ.

ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿದ್ದಾರೆ. ಕೆಲವು ಸಲ ವಿದ್ಯಾರ್ಥಿಗಳನ್ನು ನಾಯಿಗಳು ಅಟ್ಟಾಡಿಸಿಕೊಂಡು ಬಂದಿದ್ದೂ ಇದೆ ಎಂದು ನ್ಯೂಸ್ ನಾಟೌಟ್ ಗೆ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರಿಗೂ ನಾಯಿಗಳು ಅಡ್ಡ ಬಂದು ಬೈಕ್ ಸಮೇತ ಸವಾರರು ಪಲ್ಟಿಯಾಗಿ ಆಸ್ಪತ್ರೆ ಸೇರಿರುವ ಹಲವು ಉದಾಹರಣೆಗಳು ಕೂಡ ಇದೆ. ಸುಳ್ಯದ ಶ್ರೀ ರಾಮ್ ಪೇಟೆ, ನಗರ ಪಂಚಾಯತ್ ಸುತ್ತಮುತ್ತ, ಹಳೆಗೇಟು, ಖಾಸಗಿ ಬಸ್ ನಿಲ್ದಾಣದ ಸಮೀಪ ನಾಯಿಗಳು ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿವೆ. ಈ ಬಗ್ಗೆ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Related posts

ಕರಿಕೆ :ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಘಟಕ ಉದ್ಘಾಟನೆ, ನೂತನ ಪದಾಧಿಕಾರಿಗಳ ನೇಮಕ

ಸುಳ್ಯ: ದ. ಕ. ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ನಾಳೆ ಸುಳ್ಯಕ್ಕೆ ಆಗಮನ,ಪ್ರಮುಖರ ಮನೆಗೆ ಭೇಟಿ,ಕಾರ್ಯಕ್ರಮಗಳಲ್ಲಿ ಭಾಗಿ

ಸುಳ್ಯ: ಕುಂಕುಂ ಫ್ಯಾಶನ್‌ನಲ್ಲಿ ಮಾನ್ಸೂನ್ ಆಫರ್ ಕೆಲವು ದಿನಗಳು ಮಾತ್ರ