ನ್ಯೂಸ್ ನಾಟೌಟ್: ಸೌಜನ್ಯ ಹೋರಾಟಕ್ಕೆ ಉಚಿತ ವಾಹನದ ವ್ಯವಸ್ಥೆ ಇದೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ. ಈ ಬೆನ್ನಲ್ಲೇ ಅಂತಹ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ ಎಂದು ಪಯಸ್ವಿನಿ ಟೂರಿಸ್ಟ್ ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಯಂತ್ ಅರ್ಲಡ್ಕ ಸ್ಪಷ್ಟಪಡಿಸಿದ್ದಾರೆ. ವಾಟ್ಸಾಪ್ ನಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್ ಅನ್ನು ಯಾರೂ ಶೇರ್ ಮಾಡಬಾರದು ಎಂದು ಜಯಂತ್ ಮನವಿ ಮಾಡಿಕೊಂಡಿದ್ದಾರೆ.
ಸುಳ್ಯ ತಾಲೂಕಿನಾದ್ಯಂತ ಖಾಸಗಿ ಟೂರಿಸ್ಟ್ ವಾಹನ ಚಾಲಕರು-ಮಾಲೀಕರು ಸ್ವಯಂ ಪ್ರೇರಿತರಾಗಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಸೆ.೩ಕ್ಕೆ ಬೆಳ್ತಂಗಡಿಯಲ್ಲಿ ನಡೆಯಲಿರುವ ಸೌಜನ್ಯ ಪರ ಹೋರಾಟಕ್ಕೆ ವಾಹನ ವ್ಯವಸ್ಥೆ ನೀಡಿ ಬೆಂಬಲ ನೀಡುತ್ತಿದ್ದೇವೆ. 25,000ಕ್ಕೂ ಅಧಿಕ ಮಂದಿ ಸುಳ್ಯ ತಾಲೂಕಿನಿಂದಲೇ ಬೆಳ್ತಂಗಡಿಯಲ್ಲಿ ಹೋಗಿ ಸೇರುವ ನಿರೀಕ್ಷೆ ಇದೆ ಅನ್ನುವ ಪೋಸ್ಟರ್ ಎಲ್ಲ ಕಡೆ ವೈರಲ್ ಆಗುತ್ತಿದೆ.
ಈ ಬಗ್ಗೆ ನ್ಯೂಸ್ ನಾಟೌಟ್ ನಲ್ಲಿ ಮಾತನಾಡಿದ ಜಯಂತ್ ಅರ್ಲಡ್ಕ , ‘ಅಷ್ಟು ಜನರಿಗೆ ವಾಹನದ ವ್ಯವಸ್ಥೆ ಉಚಿತವಾಗಿ ಕೊಡುವುದು ಸುಲಭದ ವಿಷಯವಲ್ಲ, ಯಾರದ್ದಾದರೂ ಬಾಡಿಗೆ ಇದ್ದರೆ ಹೋಗುತ್ತೇವೆ, ಸುಳ್ಳು ಸುದ್ದಿ ಗಳಿಗೆ ಕಿವಿಕೊಡಬೇಡಿ, ಈ ವಿಚಾರವನ್ನು ಯಾರೂ ಶೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.