ಕರಾವಳಿ

ಸೌಜನ್ಯ ಫ್ಲೆಕ್ಸ್ ತೆರವುಗೊಳಿಸಿದ ಪ್ರಕರಣ, ಪೊಲೀಸ್ ಅಧಿಕಾರಿಯ ಅಮಾನತಿಗೆ ಆಗ್ರಹಿಸಿ SP ಗೆ ದೂರು ಸಲ್ಲಿಸಿದ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ

248

ನ್ಯೂಸ್ ನಾಟೌಟ್: ಸೌಜನ್ಯ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಸುಳ್ಯ ನಗರದಲ್ಲಿ ಸೌಜನ್ಯ ಪ್ರಕರಣದ ಅನುಮತಿ ಪಡೆದು ಅಳವಡಿಸಿರುವ ಫ್ಲೆಕ್ಸ್ ಅನ್ನು ತೆರವುಗೊಳಿಸಲಾಗಿದೆ. ಪೊಲೀಸರೇ ಇದನ್ನು ಮುಂದೆ ನಿಂತು ಮಾಡಿಸಿದ್ದಾರೆ. ಅಂತಹ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಸೌಜನ್ಯ ಪ್ರಕರಣ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿಯಿಂದ ಜಿಲ್ಲಾ ಪೊಲೀಸ್ ಅಧಿಕಾರಿ (ಎಸ್‌ಪಿ) ಸಿಬಿ ರಿಷ್ಯಂತ್ ಗೆ ಒತ್ತಾಯಿಸಲಾಗಿದೆ.

ಸುಳ್ಯ ನಗರದಾದ್ಯಂತ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಫ್ಲೆಕ್ಸ್ ಅನ್ನು ಅನುಮತಿ ಪಡೆದು ಅಳವಡಿಸಲಾಗಿತ್ತು. ಆದರೆ ಇಂದು ದಿನಾಂಕ ೩-೧೦-೨೦೨೩ರಂದು ಸುಳ್ಯಕ್ಕೆ ಕಾರ್ಯಕ್ರಮ ನಿಮಿತ್ತ ರಾಜ್ಯ ಸಭಾ ಸದಸ್ಯರಾದ ಡಾ ಡಿ ವೀರೇಂದ್ರ ಹೆಗ್ಗಡೆಯವರು ಬರುವ ಕಾರಣ ಉದ್ದೇಶ ಪೂರ್ವಕವಾಗಿ ಮಂಗಳವಾರ ಬೆಳಗ್ಗೆ ನಗರ ಪಂಚಾಯತ್ ನವರು ಫ್ಲೆಕ್ಸ್ ಅನ್ನು ತೆರವುಗೊಳಿಸುತ್ತಾರೆ. ಅನುಮತಿ ಪಡೆದಿರುವ ದಾಖಲಾತಿಯನ್ನು ಲಗತ್ತಿಸಿದ್ದೇವೆ. ಉದ್ದೇಶ ಪೂರ್ವಕವಾಗಿ ನಮ್ಮ ಹೋರಾಟವನ್ನು ಹತ್ತಿಕ್ಕುವಂತಹ ಪ್ರಯತ್ನವನ್ನು ಮಾಡಲಾಗಿದೆ. ಇದನ್ನು ಒಕ್ಕಲಿಗರ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಈ ಬಗ್ಗೆ ತಾವುಗಳು ವಿಚಾರಣೆಯನ್ನು ನಡೆಸಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಬ್ಯಾನರ್ ಹಾಕುವುದಕ್ಕೆ ನಗರ ಪಂಚಾಯತ್ ನಿಂದ ಅನುಮತಿ ಪಡೆದಿದ್ದರೂ ತೆರವುಗೊಳಿಸಿದ್ದಾರೆ ಎಂದು ಅಧಿಕಾರಿಗಳ ನಡೆಗೆ ಸೌಜನ್ಯ ಪ್ರಕರಣ ಜಿಲ್ಲಾ ಒಕ್ಕಲಿಗರ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಿಬಿ ಬಾಲಕೃಷ್ಣ ಅವರು ಖಂಡಿಸಿದ್ದರು. ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದರು. ಇದೀಗ ದಿಢೀರ್ ಬೆಳವಣಿಗೆ ಎಂಬಂತೆ ಅದೇ ಸ್ಥಳದಲ್ಲಿ ಸೌಜನ್ಯ ಪರ ಬ್ಯಾನರ್‌ ಅನ್ನು ಸಂಘಟಕರು ಅಳವಡಿಸಿದ್ದಾರೆ. ಈ ಬೆನ್ನಲ್ಲೇ ಸೌಜನ್ಯ ಪ್ರಕರಣ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿಯಿಂದ ದೂರು ಕೂಡ ದಾಖಲಾಗಿದೆ.

See also  ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಮಡಿಕೇರಿಯ ವ್ಯಕ್ತಿ ಆತ್ಮಹತ್ಯೆ..! ದೈವ ಮುನಿಯಿತೇ..? ಈ ನಿಗೂಢ ಸಾವಿನ ರಹಸ್ಯವೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget