ಕರಾವಳಿಸುಳ್ಯ

ಸ್ನೇಹ ಶಾಲೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ, ಮೈಸೂರು ಮಾನಸಗಂಗೋತ್ರಿ ಪ್ರೊಫೆಸರ್ ಭಾಗಿ

229

ನ್ಯೂಸ್ ನಾಟೌಟ್: ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸ್ನೇಹ ಶಾಲೆಯಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳ ಪಥ ಸಂಚಲನ ಆಕರ್ಷಕವಾಗಿ ಸಾಗಿತು. ಮೈಸೂರು ಮಾನಸಗಂಗೋತ್ರಿ ಪ್ರೊಫೆಸರ್ ಗೋಪಾಲ ಮರಾಠೆ ಧ್ವಜಾರೋಹಣ ಮಾಡಿದರು.

ಬಳಿಕ ಮಾತನಾಡಿದ ಅವರು, “ಸಂವಿಧಾನ ರಚನೆಯ ಬಳಿಕ ಭಾರತೀಯರೆಲ್ಲರೂ ಸ್ವತಂತ್ರರಾದರು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಂವಿಧಾನ ರಚನೆಗೆ ದುಡಿದ ಮಹನೀಯರನ್ನು ನಾವು ನಿತ್ಯ ಸ್ಮರಿಸಬೇಕು. ದೇಶವನ್ನು ಇನ್ನಷ್ಟು ಪ್ರಗತಿಪಥದಲ್ಲಿ ಕಟ್ಟುವ ಕೆಲಸ ಮಾಡಬೇಕು. ಇದಕ್ಕೆಲ್ಲ ನಾವು ಬದ್ಧರಾಗೋಣ .ದೇಶ ವಿಶ್ವಗುರುವಾಗಲು , ರಾಷ್ಟ್ರೋತ್ಥಾನಕ್ಕಾಗಿ ಕಾರ್ಯತತ್ಪರಾಗೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಇವರು ಮಾತನಾಡಿ “ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಎರಡು ದೇಶದ ಪ್ರಮುಖ ದಿನಗಳು. ಗಣತಂತ್ರದ ಮೂಲಕ ಪ್ರಜೆಗಳೇ ಆಡಳಿತ ನಡೆಸುವ ಪದ್ಧತಿ ಜಾರಿಗೆ ಬಂತು. ಹಿರಿಯರ ಮಾರ್ಗದರ್ಶನದೊಂದಿಗೆ ನಾವೆಲ್ಲ ದೇಶ ಕಟ್ಟುವ ಕೆಲಸ ಮಾಡೋಣ” ಎಂದರು. ಮೈಸೂರು ಮಾನಸಗಂಗೋತ್ರಿ ವಿವಿ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ , ಶಿಕ್ಷಕಿ ಸವಿತಾ ಯಂ ಧನ್ಯವಾದ ಸಲ್ಲಿಸಿದರು.

See also  ಕಲ್ಲುಗುಂಡಿ: ಯಶಸ್ವಿ ಯುವಕ ಮಂಡಲ ವತಿಯಿಂದ SSLC ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಗೂನಡ್ಕದಲ್ಲಿ ಸಂಭ್ರಮದ ಶಾಲಾ ಸ್ವಾತಂತ್ರ್ಯೋತ್ಸವ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget