ಸುಳ್ಯ

ಸುಳ್ಯ : ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಬಿಳಿಯಾರು ಸರ್ಕಾರಿ ಶಾಲೆಯಲ್ಲಿ ಶ್ರಮದಾನ

ನ್ಯೂಸ್‌ ನಾಟೌಟ್‌: ಸುಳ್ಯ ತಾಲೂಕು ಅರಂತೋಡು ಗ್ರಾಮದ ಬಿಳಿಯಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ (ಜುಲೈ 14) ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಶ್ರಮದಾನ ಮಾಡಲಾಯಿತು.

ಬಿಳಿಯಾರು ಶಾಲೆಯ ಮುಖ್ಯಶಿಕ್ಷಕಿ ಶೀಲಾವತಿ ಕೆ.ಎನ್‌. ಧ್ವಜಾರೋಹಣ ನಡೆಸಿ, ಶ್ರಮದಾನಕ್ಕೆ ಚಾಲನೆ ನೀಡಿದರು. ಸಾಯಂಕಾಲ ಶ್ರಮದಾನದ ಸಮಾರೋಪ ನಡೆಯಿತು. ಶಾಲೆಯ ಮುಖ್ಯಶಿಕ್ಷಕಿ ಶೀಲಾವತಿ ಮಾತನಾಡಿ, ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಒಳ್ಳೆಯ ಕೆಲಸಗಳು ನಡೆಯುತ್ತಿವೆ. ನಮ್ಮ ಶಾಲೆಯಲ್ಲಿ ಶ್ರಮದಾನ ಮಾಡಿಕೊಡುವಂತೆ ಸಂಘಟನೆಗೆ ಮನವಿ ಮಾಡಿದಾಗ ಸಂಘಟನೆಯ ಎಲ್ಲರೂ ಸಂಪೂರ್ಣವಾಗಿ ಸ್ಪಂದಿಸಿ ಅಚ್ಚುಕಟ್ಟಾಗಿ ನಡೆಸಿದ್ದಾರೆ. ಎಲ್ಲಾ ಪದಾಧಿಕಾರಿಗಳಿಗೂ ಕೃತಜ್ಞತೆ ಸಲ್ಲಿಸಿದರು.

ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ಮಾತನಾಡಿ, ಬಡವರ ಮಕ್ಕಳು ಮುಂದೆ ಬರಬೇಕಾದರೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕು. ಈಗಾಗಲೇ ಸರ್ಕಾರಿ ಶಾಲೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಹೆಚ್ಚಿನ ಗಮನಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿಲಿಯರ್ ಶಾಲೆಯ ಅತಿಥಿ ಶಿಕ್ಷಕಿ ಅನಿತಾ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ, ಅಂಗನವಾಡಿ ಸಹಾಯಕಿ ರೇಖಾ, ಸುಳ್ಯ ತಾಲೂಕು ಘಟಕದ ಅಧ್ಯಕ್ಷ ರಮೇಶ ಕೊಡಂಕಿರಿ, ಸುಳ್ಯ ತಾಲೂಕು ಕಾರ್ಯದರ್ಶಿ ತೇಜಕುಮಾರ್ ಅರಮನೆಗಯ, ಅರಂತೋಡು ಘಟಕ ಅಧ್ಯಕ್ಷ ನವೀನ್ ಕಲ್ಲುಗುಡ್ಡೆ, ಕಾರ್ಯದರ್ಶಿ ರಾಧಾಕೃಷ್ಣ ಅರಮನೆಗಯ, ಧನಂಜಯ, ಬಾಲಕೃಷ್ಣ, ಸುಮತಿ, ಲೀಲಾವತಿ, ಸೀತಮ್ಮ , ಗಂಗಾಧರ, ರುಕ್ಮಿಣಿ, ಯತೀಶ್‌, ಸೀತಾರಾಮ, ಚಂದ್ರಶೇಖರ, ಕೊರಗಪ್ಪ, ಲಕ್ಷ್ಮೀಶ, ಶೀಲಾವತಿ, ಅನಿತಾ, ಕುಸುಮಾದರ, ಗೋಪಾಲಕೃಷ್ಣ, ಈಶ್ವರ, ವಂದನ, ಸೀತಾ ಬಿ., ಪ್ರೇಮಲತಾ ಕೆ.ಪಿ., ಕಮಲಾ ಬಿ., ಜುಬೇದ್ರಾ, ಶೃತಿ ಬಿ. ವಾರಿಜಾ ವೈ., ಶೇಷಮ್ಮ ಮತ್ತಿತರರು ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳಾದ ಪೃಥ್ವಿ, ಶ್ರಾವ್ಯ, ಚಾರ್ಯ, ಸಿಂಚನ ಪ್ರಾರ್ಥನೆ ಹಾಡಿದರು.

Related posts

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ರಾತ್ರಿ 11 ಗಂಟೆ ಮೇಲೆ ಹೋಟೆಲ್ ತೆರೆಯುವಂಗಿಲ್ಲ, ಪೊಲೀಸರ ಖಡಕ್ ವಾರ್ನಿಂಗ್ ..!

ಕಡಬದಲ್ಲಿ ವಿದ್ಯುತ್ ಅವಘಡ: ವಿದ್ಯುತ್ ಕಂಬವೇರಿದ ಲೈನ್‌ಮ್ಯಾನ್ ದುರಂತ ಸಾವು