ಕ್ರೈಂ

ಸುಳ್ಯದಲ್ಲಿ ಫ್ಯಾನ್ಸಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿಗೆ ಕಿರುಕುಳ

589

ನ್ಯೂಸ್ ನಾಟೌಟ್: ಸುಳ್ಯದ ಫ್ಯಾನ್ಸಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿಗೆ ಸಮೀಪದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಮೊಬೈಕ್ ಕಿತ್ತುಕೊಂಡು ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ ಘಟನೆ ನಡೆದಿದೆ. ಇದರಿಂದ ರೊಚ್ಚಿಗೆದ್ದ ಯುವತಿಯ ಮನೆಯವರು ಹಾಗೂ ಸ್ಥಳೀಯರು ಪಳ್ಳಂಗೋಡು ಮೂಲದ ಯುವಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮೇ 25 ರಂದು ಸುಳ್ಯದ ಹಳೆ ಗೇಟಿನಲ್ಲಿ ನಡೆದಿದೆ. ಈ ಬಗ್ಗೆ ಎರಡು ಕಡೆಯಿಂದ ಯಾವುದೇ ದೂರು ಬಾರದ ಹಿನ್ನಲೆಯಲ್ಲಿ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.

ಅಂಗಡಿಯಲ್ಲಿ ಒಬ್ಬಳೆ ಇದ್ದ ವೇಳೆ ಖರೀದಿಯ ನೆಪದಲ್ಲಿ ಅಲ್ಲಿಗೆ ಬಂದ ಯುವಕ ಯುವತಿಯ ಫೋನ್ ನಂಬರ್ ಕೇಳಿದನೆನ್ನಲಾಗಿದೆ. ಈ ಸಂದರ್ಭ ಯುವತಿ ನಂಬರ್ ನೀಡಲು ನಿರಾಕರಿಸಿದ್ದಾರೆ. ಈ ವೇಳೆ ಆತ ಯುವತಿಯ ಕೈಯಿಂದ ಮೊಬೈಲ್ ಫೋನ್ ಕಿತ್ತುಕೊಂಡು ಅದರಿಂದ ತನ್ನ ಮೊಬೈಲಿಗೆ ಫೋನ್ ಮಾಡುವ ಸಂದರ್ಭ ಯುವತಿ ಮೊಬೈಲ್ ಎಳೆದುಕೊಂಡು ಸ್ಥಳೀಯರನ್ನು ಕರೆದಿದ್ದಾಳೆ ಎನ್ನಲಾಗಿದೆ. ಭಯಗೊಂಡ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ಯುವತಿ ಅವರ ಮನೆಯವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದು, ಯುವತಿಯ ಪೋಷಕರು ಮತ್ತು ಸ್ಥಳೀಯ ಯುವಕರು ಹೋಟೆಲ್ ಬಳಿಗೆ  ತೆರಳಿ ಯುವಕನನ್ನು ಅಂಗಡಿಯಿಂದ ಹೊರಕ್ಕೆ ಕರೆದು ಧರ್ಮದೇಟು ನೀಡಿದರೆನ್ನಲಾಗಿದೆ. ಬಳಿಕ ಬಂದ ಹೋಟೆಲ್ ಮಾಲೀಕರು ಆ ಯುವಕನಿಗೆ ಒಂದೇಟು ಹೊಡೆದು ಕೆಲಸದಿಂದ ವಜಾಗೊಳಿಸಿ ಕಳುಹಿಸಿರುವುದಾಗಿ ತಿಳಿದುಬಂದಿದೆ.

See also  ವರದಕ್ಷಿಣೆಯಾಗಿ ಚಿನ್ನಾಭರಣ, ಫ್ರಿಜ್, ಕೂಲರ್, ಬೆಡ್ ಗಳನ್ನು ತನ್ನ ತವರಿನಿಂದ ತಂದಿದ್ದ ಹೆಂಡತಿ..! ಇನ್ನೂ ಹೆಚ್ಚು ವರದಕ್ಷಿಣೆ ತರುವಂತೆ ಮನೆಯಿಂದ ಹೊರಹಾಕಿದ ಗಂಡ..! ವಿಡಿಯೋ ವೈರಲ್
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget