ಕರಾವಳಿಕಾಸರಗೋಡುಕೊಡಗುಸುಳ್ಯ

ಸುಳ್ಯ: ಸಂಪಾಜೆಯಲ್ಲಿ ಬಸ್‌-ಕಾರು ಭೀಕರ ಅಪಘಾತ ಪ್ರಕರಣ, ತುರ್ತು ನಿಗಾ ಘಟಕದಲ್ಲಿದ್ದ ಬಾಲಕ ಪ್ರಾಣಾಪಾಯದಿಂದ ಪಾರು

349

ನ್ಯೂಸ್ ನಾಟೌಟ್: ಸಂಪಾಜೆಯಲ್ಲಿ ನಡೆದಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸ್ವಿಫ್ಟ್‌ ಕಾರಿನ ನಡುವಿನ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು ಸುಳ್ಯದ ಕೆವಿಜಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಡಿಹಾನ್(6 ವರ್ಷ) ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕೆವಿಜಿ ಆಸ್ಪತ್ರೆಯ ವೈದ್ಯರ ತಂಡ ತೀವ್ರ ನಿಗಾ ಘಟಕದಲ್ಲಿದ್ದ ಬಾಲಕನ ಪ್ರಾಣ ರಕ್ಷಿಸುವಲ್ಲಿ ಅತ್ಯಂತ ಮುತುವರ್ಜಿಯಿಂದ ಕೆಲಸ ನಿರ್ವಹಿಸಿದ್ದರು. ಅಂತಿಮವಾಗಿ ವೈದ್ಯರ ತಂಡದ ಶ್ರಮದಿಂದ ಬಾಲಕ ಈಗ ಚೇತರಿಸಿಕೊಂಡಿದ್ದಾನೆ. ಸದ್ಯ ಬಾಲಕನ ತಂದೆ-ತಾಯಿ ಮಂಡ್ಯದಿಂದ ಬಂದು ಬಾಲಕನನ್ನುಹೆಚ್ಚಿನ ಚಿಕಿತ್ಸೆಗಾಗಿ ತಮ್ಮ ಊರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ರಜೆ ಇದ್ದುದರಿಂದ ಬಾಲಕ ಹಾಗೂ ಆತನ ಅಣ್ಣ ತನ್ನ ಚಿಕ್ಕಮ್ಮನ ಜತೆ ಪ್ರವಾಸ ಹೊರಟ್ಟಿದ್ದರು ಎಂದು ತಿಳಿದುಬಂದಿದೆ. ಕಾರಿನಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಬಿಹಾನ್ ನ ಸಹೋದರ ಸಾವಿಗೀಡಾಗಿದ್ದಾನೆ. ಸದ್ಯ ಗಾಯಗೊಂಡಿರುವ ಮತ್ತೋರ್ವ ವ್ಯಕ್ತಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

See also  ಉಡುಪಿ: ಕಾಪು ಮಾರಿಗುಡಿ ದೇಗುಲಕ್ಕೆ ಭೇಟಿ ನೀಡಿದ ಡಿ.ಕೆ ಶಿವಕುಮಾರ್, ರಾಜಕೀಯ ನಾಯಕರಲ್ಲಿ ಕುತೂಹಲ ಮೂಡಿಸಿದ ಡಿಕೆಶಿಯ ಹಿಂದುತ್ವದ ಜಪ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget