ಸುಳ್ಯ

ತಾಲೂಕು ಸಾಹಿತ್ಯ ಪರಿಷತ್ತಿಗೆ ಚಂದ್ರಶೇಖರ ಪೇರಾಲು ನೂತನ ಅಧ್ಯಕ್ಷ

ಸುಳ್ಯ: ಇಲ್ಲಿನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಪೇರಾಲು ಆಯ್ಕೆಯಾಗಿದ್ದಾರೆ. ಹೊಸ ಆಯ್ಕೆಯನ್ನು ಘೋಷಿಸಿ ಜಿಲ್ಲಾಧ್ಯಕ್ಷರಾದ ಡಾ.ಶ್ರೀನಾಥ್ ಎಂ.ಪಿ. ಆದೇಶ ಹೊರಡಿಸಿದ್ದಾರೆ.

ಚಂದ್ರಶೇಖರ ಪೇರಾಲು ಅವರು ಕಳೆದ ಅವಧಿಯಲ್ಲಿ ತಾಲೂಕು ಕ.ಸಾ.ಪ. ಗೌರವ ಕಾರ್ಯದರ್ಶಿ ಆಗಿದ್ದರು. ಸುವಿಚಾರ ಸಾಹಿತ್ಯ ವೇದಿಕೆಯ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದರು. ಇತ್ತೀಚೆಗಷ್ಟೆ ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದ ಅವರು ಕ.ಸಾ.ಪ. ಅಧ್ಯಕ್ಷರಾಗಬೇಕೆಂದು ಸುಳ್ಯದಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು.

Related posts

ಸುಳ್ಯ: ಚಂದ್ರಯಾನ -3 ಯಶಸ್ಸಿಗೆ ಕಾರಣರಾದ ಇಸ್ರೋ ವಿಜ್ಞಾನಿಗಳಿಗೆ ಎಂ. ವೆಂಕಪ್ಪ ಗೌಡ ಅಭಿನಂದನೆ

ಕೆವಿಜಿ ಕ್ಯಾಂಪಸ್ ಗೆ ಬ್ರಿಜೇಶ್ ಚೌಟ ಭೇಟಿ, ಯುವ ಸಮೂಹದ ಜೊತೆ ಸಂವಾದ

ವೀರ ಮಾರುತಿ ಟ್ರೋಫಿಯ ಕ್ರಿಕೆಟ್ ಪಂದ್ಯಾಟ ಸಂಪನ್ನ