ಕರಾವಳಿಸುಳ್ಯ

ಸುಳ್ಯ: NMCಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಸಂಭ್ರಮ,ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿರುವ ಸಂದರ್ಭ ಯುವಜನತೆ ಪಾತ್ರ ಮಹತ್ವದ್ದು-ಡಾ.ಕೆ.ವಿ. ಚಿದಾನಂದ

ನ್ಯೂಸ್‌ ನಾಟೌಟ್‌: ಇಂದು ದೇಶದೆಲ್ಲೆಡೆ ಗಣರಾಜೋತ್ಸವದ ಸಂಭ್ರಮ.ಈ ಪ್ರಯುಕ್ತ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜ್‌ನ ಆವರಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ನಡೆಯಿತು.

ಈ ಸಂದರ್ಭ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಸುಳ್ಯ ಇದರ ಅಧ್ಯಕ್ಷ ಡಾ. ಕೆ ವಿ ಚಿದಾನಂದರು ಧ್ವಜಾರೋಹಣಗೈದು ಮಾತನಾಡಿದರು. “ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿರುವ ಸಂದರ್ಭ ಯುವಜನತೆ ಪಾತ್ರ ಮಹತ್ವದ್ದು. ರಾಷ್ಟೀಯ ಶಿಕ್ಷಣ ನೀತಿ ಮೂಲಕ ಕಲಿಕೆ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಯುತ್ತಿರುವುದರಿಂದ ಇನ್ನಷ್ಟು ಪ್ರಗತಿ ಸಾಧ್ಯ” ಎಂದರು.ಈ ಸಂದರ್ಭ ಎಲ್ಲರಿಗೂ 75ನೇ ವರ್ಷದ ಗಣರಾಜ್ಯ ದಿನದ ಶುಭಾಶಯಗಳನ್ನು ತಿಳಿಸಿದರು.

ವೇದಿಕೆಯಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಶೈಕ್ಷಣಿಕ ಸಲಹೆಗಾರರು ಪ್ರೊ. ಬಾಲಚಂದ್ರ ಗೌಡ ಎಂ, ಪ್ರೊ. ಜವರೇ ಗೌಡ, ಪದವಿ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ. ಎಂ, ಪದವಿ ಪೂರ್ವ ಪ್ರಾಂಶುಪಾಲೆ ಶ್ರೀಮತಿ ಮಿಥಾಲಿ ರೈ, ಚಂದ್ರಶೇಖರ್ ಪೇರಾಲು ಮತ್ತು ಇನ್ನಿತರರು ಉಪಸ್ಥಿತರಿದ್ದರು. ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಎಲ್ಲಾ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ, ಕಾಲೇಜು ಎನ್ ಸಿ ಸಿ, ಎನ್ ಎಸ್ ಎಸ್, ರೇಂಜರ್ ಮತ್ತು ರೋವರ್ಸ್, ರೆಡ್ ಕ್ರಾಸ್ ವಿಭಾಗಗಳ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಆ್ಯಂಬುಲೆನ್ಸ್ ಮತ್ತು ಕಾರು ಮಧ್ಯೆ ಭೀಕರ ಅಪಘಾತ..! 3 ರ ದುರಂತ ಅಂತ್ಯ..!

Subrahmanya: ವರುಣನ ಅಬ್ಬರಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಬಳಿಯಲ್ಲಿರುವ ಸ್ನಾನ ಘಟ್ಟ ಸಂಪೂರ್ಣ ಮುಳುಗಡೆ,ಭಕ್ತಾದಿಗಳಿಗೆ ನೀರಿಗಿಳಿಯದಂತೆ ಸೂಚನೆ

ಆಗುಂಬೆ ಘಾಟ್ ನಲ್ಲಿ ಬಸ್‌-ಬೈಕ್‌ ನಡುವೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಯುವತಿ ಗಂಭೀರ