ಕರಾವಳಿ

ಸುಳ್ಯದಲ್ಲಿ ಇಲಿ ಜ್ವರ ಹಾವಳಿ, ಯುವಕ ಬಲಿ

574

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗದಲ್ಲಿ ಕಾಣಿಸಿಕೊಂಡಿರುವ ಇಲಿ ಜ್ವರ ಇದೀಗ ಸುಳ್ಯಕ್ಕೂ ವ್ಯಾಪಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸುಳ್ಯ ನಗರ ಹೊರವಲಯದ ಜಯನಗರದಿಂದ ಸಾವಿನ ಸುದ್ದಿಯೊಂದು ವರದಿಯಾಗಿದೆ.

ನಿತ್ಯಾದರ್ ಸಮುದಾಯದ ಜಯನಗರ ರಿಚರ್ಡ್ ಕ್ರಾಸ್ತ ಮತ್ತು ಜುಲಿಯಾನ ಡಿಸೋಜ ಇವರ 2ನೇ ಮಗ ಆಕರ್ಷ್ ಎಲೋಸಿಯಸ್ ಕ್ರಾಸ್ತ(35) ಇಲಿ ಜ್ವರದಿಂದ ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ. ಶನಿವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆಕರ್ಷ್ ಮೃತಪಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಲ್ಲಿದ್ದ ಆಕರ್ಷ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲಿ ಜ್ವರದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಜನರು ಹೆಚ್ಚು ಜಾಗರೂಕವಾಗಿರಬೇಕಾದ ಅವಶ್ಯಕತೆ ಇದೆ, ಜ್ವರ, ತಲೆನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಪಾಸಣೆಗೆ ಒಳಪಡುವುದು ಒಳ್ಳೆಯದು ಎನ್ನುವುದು ನ್ಯೂಸ್ ನಾಟೌಟ್ ಕಳಕಳಿಯಾಗಿದೆ.

See also  ಮಾಲಾಧಾರಿ ಮೇಲೆ ಹಲ್ಲೆ, ಅಯ್ಯಪ್ಪ ಮಾಲೆ ಕಿತ್ತು ಹಾಕಿದ ದುಷ್ಕರ್ಮಿ..! ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ ಆರೋಪಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget